ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ಗೆ ಈ ಬಾರಿ ಹತ್ತು ಮಂದಿ ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದು ಈವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಅಫ್ಘಾನಿಸ್ತಾನ, ಘಾನಾ, ಬಾಂಗ್ಲಾ, ಮಲಾವಿ ಸೇರಿದಂತೆ ವಿವಿಧ ದೇಶಗಳಿಂದ ಒಟ್ಟು ಹತ್ತು ಮಂದಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಸೇರ್ಪಡೆಗೊಂಡಿದ್ದಾರೆ. ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಜಿ, ಜೀನೋಮಿಕ್ ಸೈನ್ಸ್, ಎಂ.ಬಿ.ಎ, ಎಂ.ಕಾಂ, ಬಿ.ಎ ಇಂಟರ್‍ನ್ಯಾಶನಲ್ ರಿಲೇಶನ್ಸ್, ಅರ್ಥಶಾಸ್ತ್ರ, ಕಾನೂನು ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಪ್ರವೇಶ ಪಡೆದಿದ್ದಾರೆ.
ಕಳೆದ ಅಧ್ಯಯನ ವರ್ಷದಲ್ಲಿ ಆರು ಮಂದಿ ವಿದೇಶಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಿರತರಾಗಿದ್ದರು. ಪ್ರವೇಶ ಪ್ರಕ್ರಿಯೆಯನ್ನು ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಅವರ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ವ್ಯವಹಾರಗಳ ಕಚೇರಿ ನೋಡಿಕೊಳ್ಳುತ್ತಿದೆ. ಪ್ರೊ. ವಿನ್ಸೆಂಟ್ ಮ್ಯಾಥ್ಯೂ ನಿರ್ದೇಶಕರು, ಡಾ.ರವಿ ಕುಮಾರ್ ಕಣಪರ್ತಿ ಜಂಟಿ ನಿರ್ದೇಶಕರು ಹಾಗೂ ಪೆÇ್ರ.ಕೆ.ಅರುಣ್ ಕುಮಾರ್, ಡಾ.ಚಿತ್ರಾ ಮಣಿಸ್ಸೆರಿ, ಡಾ.ಸ್ಮಿತಾ ಸುಧೀರ್ ಮತ್ತು ಕೆ.ಅಯ್ಯನಾರ್ ಸದಸ್ಯರಾಗಿರುತ್ತಾರೆ.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹತ್ತುಮಂದಿ ವಿದೇಶಿ ವಿದ್ಯಾರ್ಥಿಗಳು
0
ನವೆಂಬರ್ 03, 2022
Tags