ಬದಿಯಡ್ಕ: ಬದಿಯಡ್ಕ ಪಂಚಾಯಿತಿ ವಯೋ ಜನರ ಹಗಲು ಮನೆಯಲ್ಲಿ ಕೋಟಿ ಕಂಠಗಳಲ್ಲಿ ನಾಡ ಗೀತೆ ಗಾಯನ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ಮಂಗಳವಾರ ನಡೆಯಿತು. ಘಟಕಾಧ್ಯಕ್ಷ ಪೆರ್ಮುಖ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೋಲೀಸ್ ಠಾಣಾಧಿಕಾರಿ ವಸಂತ ಮಂಗಳೂರು ದೀಪಬೆಳಗಿಸಿ ಉದ್ಘಾಟಿಸಿದರು. ಬಳ್ಳಂಬೆಟ್ಟು ಈಶ್ವರ ಭಟ್ ಪ್ರಾರ್ಥನೆಗೈದರು.
ಬಳಿಕ ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಮತ್ತು ಅಧ್ಯಾಪಕಿ ಸುಶೀಲ ಪದ್ಯಾಣ ನೇತೃತ್ವದಲ್ಲಿ ಸಾಮೂಹಿಕ ನಾಡಗೀತೆ ಗಾಯನ ಜರುಗಿತು.
ಸಮಾರಂಭದಲ್ಲಿ 2022ರ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಕುಮಾರಿ ಅನುಶಾ ಬಾಳೆಗದ್ದೆ ಅವರನ್ನು ಸ್ಮರಣಿಕೆಯಿತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ. ಗೋಪಾಲಕೃಷ್ಣ ಭಟ್, ಕರ್ಹಾಡ ಪತ್ರಿಕೆಯ ಸಂಪಾದಕ ಪಿಲಿಂಗಲ್ಲು ಕೃಷ್ಣ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ರಗತಿಪರ ಕೃಷಿಕ ಶ್ಯಾಮ ಭಟ್ಟ ಓಡಂಗಲ್ಲು, ಕೋಳಾರಿ ಗೋಪಾಲ ಭಟ್ಟ, ಎಸ್.ಎನ್. ಭಟ್ ಸಂಪತ್ತಿಲ, ನಿವೃತ್ತ ಪೋಲೀಸ್ ಠಾಣಾಧಿಕಾರಿ ವಸಂತ ಮಂಗಳೂರು, ತಮ್ಮ ಬಾಲ್ಯ ಕಾಲದ ಶಾಲಾ ದಿನಗಳನ್ನು ಮೆಲುಕು ಹಾಕಿದರು. ನಾಡೋಜ ಕವಿ ಕಯ್ಯಾರರ ಕವನಗಳನ್ನು ವಿಜಯಲಕ್ಷ್ಮಿ ಪುತ್ತೂರು, ಮತ್ತು ಗಂಗಮ್ಮ ಬಲಿಪಗುಳಿ ಸುಶ್ರಾವ್ಯ ವಾಗಿ ಹಾಡಿದರು. ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ಸ್ವಾಗತಿಸಿ, ನಿವೃತ್ತ ಪ್ರಾಧ್ಯಾಪಕ ವಸಂತಚಂದ್ರ ಮಂಗಳೂರು ವಂದಿಸಿದರು.
ಬದಿಯಡ್ಕ ಹಗಲುಮನೆಯಲ್ಲಿ ಕೋಟಿಕಂಠ ಗಾಯನ
0
ನವೆಂಬರ್ 02, 2022
Tags