ಬದಿಯಡ್ಕ: ಬಿ ಆರ್ ಸಿ ಕುಂಬಳೆಯ ಆಶ್ರಯದಲ್ಲಿ ಸಮಗ್ರ ಶಿಕ್ಷಾ ಕೇರಳ ‘ಹೆಜ್ಜೆಗುರುತುಗಳು’ ಎಂಬ ಕಾರ್ಯಕ್ರಮವನ್ನು ಪ್ರಾದೇಶಿಕ ಚರಿತ್ರೆ ರಚನೆಗಾಗಿ ಹಮ್ಮಿಕ್ಕೊಂಡಿತು.
ಕಾರ್ಯಕ್ರಮವನ್ನು ಕಾಸರಗೋಡು ಸಕಾಈರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಉದ್ಘಾಟಿಸಿ ಮಾತನಾಡಿ, ಕಾಸರಗೋಡು ಎನ್ನುವುದಕ್ಕಿಂತ ಕುಂಬಳೆ ಸೀಮೆ ಎನ್ನುವುದು ಬಹು ಚಾರಿತ್ರಿಕ ಅಂಶಗಳನ್ನೊಳಗೊಂಡ ಪ್ರದೇಶವಾಗಿದೆ. ಸ್ಥಳ, ಭಾಷೆ ಇತ್ಯಾದಿ ವಿಶೇಷತೆಗಳನ್ನೊಳಗೊಂಡ ಕಾಸರಗೋಡು ಪ್ರದೇಶದಲ್ಲಿ ಬೇಕಾದಷ್ಟು ಚರಿತ್ರೆ ರಚನೆಗಳಿಗೆ ಅವಕಾಶವಿದೆ. ಸ್ಥಳೀಯ ಚರಿತ್ರೆಗಳ ರಚನೆಯಾಗಬೇಕು ಮತ್ತು ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು ಎಂದರು. ಪ್ರಾದೇಶಿಕ ಚರಿತ್ರೆ ಹೇಗಿರಬೇಕು? ಎಂಬುದರ ಬಗ್ಗೆ ಅತೀ ಸೂಕ್ಷ್ಮ ವಿಚಾರದಿಂದ ಹಿಡಿದು ಕೂಲಂಕುಷವಾಗಿ ವಿವರಿಸಿದರು.
ಜಿ ಎಚ್ ಎಸ್ ಪೆರಡಾಲ ಶಾಲೆಯ ಮುಖ್ಯೋಪಾಧ್ಯಾಯ ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲೆಯ ಎಲ್ಲಾ ಹೈಸ್ಕೂಲುಗಳ ಸಮಾಜ ಶಾಸ್ತ್ರ ಅಧ್ಯಾಪಕರು ತರಬೇತಿಯಲ್ಲಿ ಭಾಗವಹಿಸಿದ್ದರು. ಬಿ ಆರ್ ಸಿ ಯ ಸಂಯೋಜಕ ಜಯರಾಮ ಜೆ ಸ್ವಾಗತಿಸಿ, ಸಿ ಆರ್ ಸಿ ಸಂಯೋಜಕ ಸರಸ್ವತಿ ಎಚ್ ವಂದಿಸಿದರು.
ಕುಂಬಳೆ ಬಿ.ಆರ್.ಸಿ. ಆಶ್ರಯದಲ್ಲಿ "ಹೆಜ್ಜೆ ಗುರುತುಗಳು" ಅಧ್ಯಾಪಕರಿಗೆ ತರಬೇತಿ
0
ನವೆಂಬರ್ 19, 2022
Tags