ಕೊಲ್ಲಂ: ಕೊಲ್ಲಂ ಬೈಪಾಸ್ ಮೂಲಕ ವಿಮಾನ ಹಾರುತ್ತಿರುವ ದೃಶ್ಯಾವಳಿ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಏಕನೋಟದಲ್ಲಿ ವಿಮಾನವು ರಸ್ತೆಯ ಮೇಲೆ ಓಡುತ್ತಿರುವಂತೆ ಕಂಡುಬಂದಿದೆ.
ಈ ದೃಶ್ಯವನ್ನು ನೋಡಲು ನೂರಾರು ಜನರು ಜಮಾಯಿಸಿದ್ದರು.
ಆದರೆ ಪರಾಂಬರಿಸಿದಾಗ ಸಂಚರಿಸಿದ್ದ ವಿಮಾನವಲ್ಲ, ಬದಲಿಗೆ ವಿಮಾನವನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿರುವುದಾಗಿ ತಿಳಿದುಬಂತು. ಏರ್ ಇಂಡಿಯಾದ ಸ್ಥಗಿತಗೊಂಡಿದ್ದ ಏರ್ ಬಸ್ 320 ಅನ್ನು ಲಾರಿಯಲ್ಲಿ ತುಂಬಿಕೊಂಡು ಬೈಪಾಸ್‍ಗೆ ತರಲಾಯಿತು. ಹರಾಜಿನಲ್ಲಿ ಖರೀದಿಸಿದ ಈ ವಿಮಾನವನ್ನು ತಿರುವನಂತಪುರಂನಿಂದ ಹೈದರಾಬಾದ್‍ಗೆ ಲಾರಿಯಲ್ಲಿ ಸಾಗಿಸಲಾಗುತ್ತಿದೆ.
ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ವಿಮಾನವನ್ನು ಹರಾಜು ಪಡೆದಿದ್ದರು. ದೊಡ್ಡ ಕಂಟೈನರ್ ಲಾರಿಯಲ್ಲಿ ಹೈದರಾಬಾದಿಗೆ ತಂದು ರೆಸ್ಟೊರೆಂಟ್ ಮಾಡಲು ಯೋಜಿಸಲಾಗಿದೆ. ಎರಡು ದಿನಗಳ ಹಿಂದೆ ವಿಮಾನ ಸಾಗಾಟ ಆರಂಭವಾಗಿದೆ. ವಿಮಾನದ ಎರಡೂ ಬದಿಗಳಲ್ಲಿನ ರೆಕ್ಕೆಗಳನ್ನು ಮತ್ತೊಂದು ವಿಮಾನದಲ್ಲಿ ಸಾಗಿಸಲಾಗುತ್ತದೆ.
ನಿನ್ನೆ ಪ್ರಯಾಣದ ವೇಳೆ ಬಲರಾಮಪುರಂನಲ್ಲಿ ವಿಮಾನದ ರೆಕ್ಕೆಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇದರಿಂದಾಗಿ ಪ್ರಯಾಣ ತಡವಾಯಿತು. ರಾತ್ರಿ ವೇಳೆ ಮಾತ್ರ ಲಾರಿ ಸಂಚರಿಸುತ್ತದೆ. ಇದು ಗಂಟೆಗೆ 30 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಹಗಲು ವೇಳೆ ಸೂಕ್ತ ಸ್ಥಳದಲ್ಲಿ ನಿಲ್ಲಿಸಿ ರಾತ್ರಿ ಪ್ರಯಾಣ ಮುಂದುವರಿಯುತ್ತಿದೆ. ಹೈದರಾಬಾದ್ ತಲುಪಲು 20 ದಿನ ಬೇಕು.
ಕೊಲ್ಲಂ ಕುರಿಪುಳ ಟೋಲ್ ಪ್ಲಾಜಾ ಬಳಿ ಲಾರಿ ನಿಂತಿದ್ದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳು ಸೇರಿದಂತೆ ಗಮನ ಸೆಳೆಯುತ್ತಿವೆ.
ಬೈಪಾಸ್ ಮೂಲಕ ಸಂಚರಿಸಿದ ವಿಮಾನ: ಅಚ್ಚರಿಗೊಂಡ ಸ್ಥಳೀಯರು
0
ನವೆಂಬರ್ 07, 2022