ನವದೆಹಲಿ: ದೇಶದಾದ್ಯಂತ ಭಯೋತ್ಪಾದನಾ ಚಟುವಟಿಕೆಗಳಿಗೆ ಯುವಕರಿಗೆ ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ಜೈಶ್-ಎ-ಮೊಹಮ್ಮದ್‌ನ (ಜೆಇಎಂ) ಐವರು ಭಯೋತ್ಪಾದಕರಿಗೆ ದೆಹಲಿ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರು ತೀರ್ಪು ನೀಡಿದ್ದು, ಜೆಇಎಂನ ಸಜ್ಜದ್ ಅಹ್ಮದ್ ಖಾನ್, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್, ಇಶ್ಪಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್-ಉದ್-ದಿನ್ ಚೋಪಾನ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.
ಈ ಪ್ರಕರಣದ ಇನ್ನೊಬ್ಬ ಅಪರಾಧಿ ತನ್ವೀರ್ ಅಹ್ಮದ್‌ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಅಪರಾಧಿಗಳು ಜೆಇಎಂನ ಸದಸ್ಯರು ಮಾತ್ರವಲ್ಲದೇ, ಭಯೋತ್ಪಾದನಾ ಚಟುವಟಿಕೆಗೆ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಒದಗಿಸುತ್ತಿದ್ದರು. ಭಯೋತ್ಪಾದಕರ ರಕ್ಷಣೆ ಮಾಡುತ್ತಾ ಭಾರತದ ವಿರೋಧಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ 2019ರ ಮಾರ್ಚ್‌ನಲ್ಲಿ ಎನ್‌ಐಎ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿತ್ತು.