ಪೆರ್ಲ: ಅಡ್ಯನಡ್ಕ ಸಮೀಪದ ಎಣ್ಮಕಜೆ ಗ್ರಾಮ ಪಂಚಾಯತಿಯ 1ನೇ ವಾರ್ಡಿಗೊಳಪಟ್ಟ ಸಾಯ ಶಾಲೆಯ ಹತ್ತಿರದ ಗುಳಿಗಮೂಲೆ ನಿವಾಸಿ ನಾರಾಯಣ ನಾಯ್ಕ್ ಎಂಬವರ ಪುತ್ರ ಜಿತೇಶ್ (16) ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ.
ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ಲಸ್ ವನ್ ವಿದ್ಯಾರ್ಥಿಯಾಗಿರುವ ಈತನಿಗೆ ತೋಟದ ಮೋಟರ್ ಶೆಡ್ ಬಳಿ ವಿದ್ಯುತ್ ಆಘಾತ ತಗುಲಿದ್ದು ತಕ್ಷಣ ಮನೆಯವರು ಹಾಗೂ ಸ್ಥಳೀಯರು ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ.
ನಿನ್ನೆ ಸಂಜೆ ಮನೆಯ ಬಳಿಯ ಪಂಪ್ ಶೆಡ್ ನಲ್ಲಿ ಈ ಘಟನೆ ನಡೆದಿದೆ. ಪಂಪ್ ಆಫ್ ಮಾಡಲು ತೆರಳಿದ್ದಾಗ ವಿದ್ಯುತ್ ಆಘಾತ ಉಂಟಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಜಿತೇಶ್ ನನ್ನು ವಿಟ್ಲ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮೃತನು ತಂದೆ ನಾರಾಯಣ ನಾಯ್ಕ, ತಾಯಿ ಪದ್ಮಾವತಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾನೆ. ಈತನ ಓರ್ವ ಸಹೋದರಿ ಹರಿಣಾಕ್ಷಿ ಈ ಹಿಂದೆಯೇ ಮೃತಪಟ್ಟಿದ್ದಳು.
ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಪಂಚೆನಾಮೆ ನಡೆಸಲಾಗಿದ್ದು ಈತನ ಅಕಾಲಿಕ ಸಾವಿಗೆ ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಪ್ರಾಂಶುಪಾಲರು, ಉಪನ್ಯಾಸಕರು,ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಆಘಾತದಿಂದ ಅಡ್ಯನಡ್ಕ ಸಾಯದಲ್ಲಿ ವಿದ್ಯಾರ್ಥಿ ದುರ್ಮರಣ
0
ನವೆಂಬರ್ 29, 2022