HEALTH TIPS

ಸಾವರ್ಕರ್​ ವಿಚಾರವಾಗಿ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಭಿನ್ನಮತ?

 

               ಮುಂಬೈ: ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮಂಗಳವಾರ ವಾಶಿಮ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸಾವರ್ಕರ್ ಬಿಜೆಪಿ ಮತ್ತು ಆರೆಸ್ಸೆಸ್​ನ ಸಂಕೇತವಾಗಿದ್ದಾರೆ ಎಂದು ಹೇಳಿದ್ದರು. 'ಅವರು ಎರಡು ಮೂರು ವರ್ಷಗಳ ಕಾಲ ಅಂಡಮಾನ್‌ನಲ್ಲಿ ಜೈಲಿನಲ್ಲಿದ್ದರು.

                    ಜೈಲಿಂದ ಹೊರ ಬರಲು ಅವರು ಕ್ಷಮಾದಾನ ಅರ್ಜಿಯನ್ನು ಬರೆದಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

                 ರಾಹುಲ್​ ಗಾಂಧಿ 'ಸಾವರ್ಕರ್ ಅವರು ತಮ್ಮ ಹೆಸರು ಬದಲಾಯಿಸಿ ಪುಸ್ತಕ ಬರೆದು ತಾವು ಎಷ್ಟು ಧೈರ್ಯಶಾಲಿ ಎಂದು ತೋರಿಸಿದ್ದಾರೆ. ಅವರು ಬ್ರಿಟಿಷರಿಂದ ಪಿಂಚಣಿ ಪಡೆಯುತ್ತಿದ್ದರು. ಅವರಿಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು' ಎಂದು ವ್ಯಂಗ್ಯವಾಡಿದರು.

                ಈ ಹೇಳಿಕೆ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಬಿರುಕು ಮೂಡಿಸುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ರಾಹುಲ್​ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಒಂದು ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ 'ನಮ್ಮ ಪಕ್ಷಕ್ಕೆ ಸಾವರ್ಕರ್​ ಬಗ್ಗೆ ಅಪಾರ ಗೌರವವಿದೆ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್​ ಬಗ್ಗೆ ರಾಹುಲ್​ ಗಾಂಧಿ ನೀಡಿದ ಹೇಳಿಕೆಯನ್ನು ನಮ್ಮ ಪಕ್ಷ ಒಪ್ಪುವುದಿಲ್ಲ' ಎಂದು ಹೇಳಿದ್ದಾರೆ.

                ಜೊತೆಗೆ 'ಬಿಜೆಪಿ ಮತ್ತು ಆರೆಸ್ಸೆಸ್​ಗೆ ಸ್ವಾತಂತ್ರ್ಯ ಹೋರಾಟದೊಂದಿಗೆ ಯಾವುದೇ ಸಂಬಂಧವಿಲ್ಲ. ಅಪ್ಪ ಮಕ್ಕಳ (ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಸೂಚಿಸುತ್ತಾ) ಸಾವರ್ಕರ್‌ ಪ್ರೀತಿಯನ್ನು ನೋಡಿದಾಗ ನಗು ಬರುತ್ತದೆ' ಎಂದು ಉದ್ಧವ್​ ಠಾಕ್ರೆ ಬಿಜೆಪಿ ಕಾಲೆಳೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries