HEALTH TIPS

ಡಕೋಟ ಎಕ್ಸ್​ಪ್ರೆಸ್​ ಸಿನಿಮಾದಂತೆ ಬಸ್​ಗೆ ಅಲಂಕಾರ ಮಾಡಿ ಮದುವೆ ದಿಬ್ಬಣ! ಚಾಲಕನಿಗೆ ಎದುರಾಯ್ತು ಸಂಕಷ್ಟ

 

               ಕೊಚ್ಚಿ: ಡಕೋಟ ಎಕ್ಸ್​​ಪ್ರೆಸ್​ ಸಿನಿಮಾದಲ್ಲಿ ಮದುವೆ ಸಮಾರಂಭವೊಂದಕ್ಕೆ ವರನ ಕಡೆಯವರನ್ನು ಕರೆದೊಯ್ಯುವ ಬಸ್​ ಅನ್ನು ಹೂವು-ಎಲೆಗಳಿಂದ ವಿಚಿತ್ರವಾಗಿ ಅಲಂಕಾರ ಮಾಡಿರುವ ದೃಶ್ಯವೊಂದಿದೆ. ಅದೇ ದೃಶ್ಯವನ್ನು ನೆನಪಿಸುವ ಘಟನೆಯೊಂದು ಕೇರಳದಲ್ಲಿ ನಡೆದಿದೆ.

ವ್ಯತ್ಯಾಸ ಏನೆಂದರೆ, ಸಿನಿಮಾದಲ್ಲಿರುವ ಖಾಸಗಿ ಬಸ್​. ಆದರೆ, ಇಲ್ಲಿರುವುದು ಕೇರಳದ ಸರ್ಕಾರಿ ಬಸ್​.

              ನಿನ್ನೆಯಿಂದ (ನ.06) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋದಲ್ಲಿ ಕೇರಳದ ಕೆಎಸ್​ಆರ್​ಟಿಸಿ ಬಸ್​ ಅನ್ನು ಬಾಳೇ ಕಂಬ ಮತ್ತು ತೆಂಗಿನ ಗರಿ ಸೇರಿದಂತೆ ಹಲವು ಎಲೆಗಳಿಂದ ಥೇಟ್​ ಡಕೋಟ ಎಕ್ಸ್​ಪ್ರೆಸ್​ ಸಿನಿಮಾದಲ್ಲಿ ಬಸ್​ ಅನ್ನು ಅಲಂಕಾರ ಮಾಡಿದಂತೆಯೇ ಮಾಡಿದ್ದಾರೆ. ಹಸಿರು ತೋರಣಗಳಿಂದ ಬಸ್​ ಸಂಪೂರ್ಣ ಮುಚ್ಚಿ ಹೋಗಿತ್ತು. ಹಿಂದೆ-ಮುಂದೆ ಎಲ್ಲಿ ನೋಡಿದರೂ ಬಸ್​ ಹಸಿರುಮಯವಾಗಿತ್ತು. ಅಲ್ಲದೆ, ಬಸ್​ ಅನ್ನು ಬಾಡಿಗೆ ಪಡೆದವರು ಬಸ್​ನ ಮುಂಭಾಗದಲ್ಲಿ ಡಾನ್ಸ್​ ಮಾಡಿರುವ ದೃಶ್ಯವು ವಿಡಿಯೋದಲ್ಲಿದೆ.

              ಈ ಬಸ್​ ಕೋತಮಂಗಲಂನಿಂದ ಅಡಿಮಲಿಗೆ ತೆರಳುತ್ತಿತ್ತು. ಭಾನುವಾರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಸ್​ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ನೆಲ್ಲಿಕುಜಿ ಮೂಲದ ಬಸ್​ ಚಾಲಕನಿಗೆ ಶೋಕಾಸ್​ ನೋಟಿಸ್​ ಸಹ ನೀಡಲಾಗಿದೆ.

                ಮದುವೆ ಸಮಾರಂಭಗಳಿಗೆ ಸರ್ಕಾರಿ ಬಸ್​ ಅನ್ನು ಬಾಡಿಗೆ ಪಡೆಯಬಹುದು. ಆದರೆ, ಮದುವೆಗೂ 30 ದಿನಗಳ ಮುಂಚೆಯೇ ಬಾಡಿಗೆ ಪಡೆಯುವ ಮಾಹಿತಿ ನೀಡಿ, ಅನುಮತಿ ಪಡೆದುಕೊಳ್ಳಬೇಕು. ಕೇರಳದಲ್ಲಿ ಇದು ಸಾಮಾನ್ಯವಾಗಿದೆ. ಆದರೆ, ಬಾಡಿಗೆಗೆ ಪಡೆದ ಬಸ್​ಗೆ ಯಾವುದೇ ಅಲಂಕಾರ ಮಾಡಬಾರದು ಎಂಬ ಸರ್ಕಾರದ ಆದೇಶವು ಇದೆ.

           ಇದೀಗ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಕೇರಳದ ಸಾರಿಗೆ ಇಲಾಖೆ ಈ ಸಂಬಂಧ ತನಿಖೆ ನಡೆಸಲಿದೆ ಎಂದು ಸಾರಿಗೆ ಸಚಿವ ಆಂಟೋನಿ ರಾಜ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries