ಕಾಸರಗೋಡು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರೀಯ ಕಾನೂನು ಸೇವೆಗಳ ಆಶ್ರಯದಲ್ಲಿ ದೇಶಾದ್ಯಂತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ನಡೆಸಿದ ಪ್ಯಾನ್ ಇಂಡಿಯಾ ಅಭಿಯಾನದ ಅಂಗವಾಗಿ ಕಾರಡ್ಕÀ, ಕಾಸರಗೋಡು, ಮಂಜೇಶ್ವರ ಮತ್ತು ಕಾಸರಗೋಡು ನಗರಸಭೆಯ ಬ್ಲಾಕ್ ಪಂಚಾಯತಿ ವ್ಯಾಪ್ತಿಯ 21 ಪಂಚಾಯತ್‍ಗಳಲ್ಲಿ ಕಾನೂನು ಅರಿವು ತರಗತಿಗಳನ್ನು ನಡೆಸಲಾಯಿತು. ಕಾನೂನು ಅರಿವಿನ ಮೂಲಕ ಜನರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಪ್ರಾಧಿಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡು ನಗರಸಭೆಯಲ್ಲಿ ನಡೆಯಿತು. ಮುಖ್ಯ ನ್ಯಾಯಿಕ ದಂಡಾಧಿಕಾರಿ ಜಿ.ಉಣ್ಣಿಕೃಷ್ಣನ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ (ಉಪ ನ್ಯಾಯಾಧೀಶ) ಬಿ.ಕರುಣಾಕರನ್, ಚೆಂಗಳ ಪಂಚಾಯತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ವಕೀಲರು ವಿವಿಧ ಕೇಂದ್ರಗಳಲ್ಲಿ ತರಗತಿ ನಡೆಸಿಕೊಟ್ಟರು.
ಕಾನೂನು ಅರಿವು ತರಗತಿಯಲ್ಲಿ ಆಯಾ ಪಂಚಾಯಿತಿಗಳ ಕುಟುಂಬಶ್ರೀ ಸದಸ್ಯರು ಭಾಗವಹಿಸಿದ್ದರು. ಸಿಡಿಎಸ್ ಅಧ್ಯಕ್ಷೆ ಆಯೇμÁ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಪಿ.ಪ್ರಕಾಶನ್ ಮುಖ್ಯ ಅತಿಥಿಯಾಗಿದ್ದರು. ಬಿ.ಸುಧೀರ್, ಅಡ್ವ.ಮಮಿತಾ ಮನೋಜ್, ಅಡ್ವ.ಎನ್.ಅಕ್ಷತಾ ಮೋಳ್ ಕಾನೂನು ಅರಿವು ತರಗತಿ ತೆಗೆದುಕೊಂಡರು. ಕಾಸರಗೋಡು ನಗರಸಭೆ ಕುಟುಂಬಶ್ರೀ ಸದಸ್ಯ ಕಾರ್ಯದರ್ಶಿ ಸುಧೀರ್ ಸ್ವಾಗತಿಸಿ, ಪ್ಯಾರಾಲೀಗಲ್ ಸ್ವಯಂಸೇವಕ ಟಿ.ಎಚ್.ತಾಜುದ್ದೀನ್ ವಂದಿಸಿದರು. ಕುಟುಂಬಶ್ರೀ ಜಿಲ್ಲಾ ಸಹಾಯಕ ಮಿಷನ್ ಸಂಯೋಜಕ ಪ್ರಕಾಶ್ ನೇತೃತ್ವದಲ್ಲಿ ಕುಟುಂಬಶ್ರೀ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕುಟುಂಬಶ್ರೀ ಸದಸ್ಯರಿಗೆ ಕಾನೂನು ಅರಿವು ತರಗತಿ
0
November 09, 2022