ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮತ್ತು ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೆಯೇತರ ಸ್ಪರ್ಧೆಗಳು ಮಂಗಳವಾರದಿಂದ ಪ್ರಾಂಭಗೊಂಡಿದೆ. ವೇದಿಕೇತರ ಸ್ಪರ್ದೆಗಳಾದ ಕಥಾ ರಚನೆ, ಕವಿತಾ ರಚನೆ, ಏಕಪಾತ್ರಾಭಿನಯ, ಲಘುಸಂಗೀತ ಮುಂತಾದವುಗಳು ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಸುಮಾರು 30 ವೇದಿಕೆಗಳಲ್ಲಿ ನಡೆಯಿತು.
ನಾಳೆಯಿಂದ ನವೆಂಬರ್ 25ರವರೆಗೆ ಹೊರಾಂಗಣ ವೇದಿಕೆಗಳಲ್ಲಿ ನೃತ್ಯ, ನಾಟಕ,ಸಮೂಹಗಾನ,ಒಪ್ಪನ,ಮಾಪಿಳಪಾಟ್,ದಫ್ ಮುಟ್,ಕೋಲಾಟ, ಯಕ್ಷಗಾನ ಮುಂತಾದ ಸ್ಪರ್ಧೆಗಳು ನಡೆಯಲಿರುವುದು.
ನಾಳೆ ಬೆಳಿಗ್ಗೆ 9.30 ಕ್ಕೆ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕಿ ಪ್ರೇಮ ಕೆ.ಭಟ್ ಧ್ವಜಾರೋಹಣ ನಡೆಸುವರು.ಬಳಿಕ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಈ.ಪಂ.ಉಪಾಧ್ಯಕ್ಷ ಶಾನುವಾಸ್ ಪಾದೂರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷ ಮೊಹಮ್ಮದ್ ಹನೀಫ ಪಿ.ಕೆ, ಗ್ರಾ.ಪಂ.ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ, ಬ್ಲಾ.ಪಂ.ಸದಸ್ಯೆ ಅಶ್ವಿನಿ ಪಜ್ವ, ಜಿಲ್ಲಾ ಶಿಕ್ಷಣ ಉಪನಿರ್ದೇಶಕ ವಾಸು ಸಿ.ಕೆ., ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶ ಎನ್, ಖ್ಯಾತ ವೈದ್ಯ ಡಾ.ಗಣೇಶ್ ಎಚ್.ಕೆ, ಚಲಚಿತ್ರ ನಟ ಸಂತೋಷ್ ಮಾಡ, ಮೀಯಪದವು ಚರ್ಚ್ ಧರ್ಮಗುರು ಎಡ್ವಿನ್ ವಿನ್ಸೆಂಟ್ ಕೊರಿಯ, ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್.ರಾವ್, ಗ್ರಾ.ಪಂ. ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ, ಅಭಿವೃದ್ದಿ ಸ್ಥಾಯೀ ಸಮಿಇ ಅಧ್ಯಕ್ಷೆ ರುಕಿಯಾ ಸಿದ್ದೀಕ್, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಸಿ. ಮೊದಲಾದವರು, ವಿವಿಧ ಕ್ಷೇತ್ರಗಳ ಪ್ರಮುಖರು ಶುಭಹಾರೈಸುವರು. ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.