ಯುನೈಟೆಡ್ ನೇಷನ್ಸ್ : ಭಾರತೀಯ ವನ್ಯಜೀವಿ ತಜ್ಞೆ ಡಾ.ಪೂರ್ಣಿಮಾ ದೇವಿ ಬರ್ಮನ್ ಅವರಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿಯಾದ ಚಾಂಪಿಯನ್ಸ್ ಆಫ್ ದಿ ಅರ್ಥ್ ನೀಡಿ ಗೌರವಿಸಲಾಗಿದೆ.
ಪರಿಸರ ಜೀವವೈವಿದ್ಯತೆ ವ್ಯವಸ್ಥೆಯ ಅವನತಿಯನ್ನು ತಡೆಗಟ್ಟಲು ಮತ್ತು ಅವನತಿಯನ್ನು ಹಿಮ್ಮುಖಗೊಳಿಸಲು ತೆಗೆದುಕೊಂಡ ಕ್ರಮಗಳಿಗಾಗಿ ಪೂರ್ಣಿಮಾ ಅವರಿಗೆ ಈ ಪ್ರಶಸ್ತಿ ಸಂದಿದೆ.
ಡಾ. ಪೂರ್ಣಿಮಾ ಅವರಿಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದ ವಾಣಿಜ್ಯೋದ್ಯಮ ನೋಟ ವಿಭಾಗದಲ್ಲಿ ಈ ವರ್ಷದ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ನೀಡಲಾಗಿದೆ.
ವನ್ಯಜೀವಿ ತಜ್ಞೆ ಪೂರ್ಣಿಮಾ ಅವರು "ಹರ್ಗಿಲಾ ಆರ್ಮಿ" ಅನ್ನು ಮುನ್ನಡೆಸುತ್ತಿದ್ದು, ಇದು ಸಂಪೂರ್ಣ ಮಹಿಳಾ ಕಾರ್ಯಕರ್ತರಿಂದ ಕೂಡಿದ ತಳಮಟ್ಟದ ಸಂರಕ್ಷಣಾ ಆಂದೋಲನವಾಗಿದೆ. "ಹರ್ಗಿಲಾ ಆರ್ಮಿ" ಅಳಿವಿನಂಚಿನಲ್ಲಿರುವ ಗ್ರೇಟರ್ ಅಡ್ಜಟಂಟ್ ಸ್ಟಾರ್ಕ್ ಕೊಕ್ಕರೆಯನ್ನು ರಕ್ಷಿಸಲು ಮೀಸಲಾಗಿದೆ.