HEALTH TIPS

ಅರಿಶಿನ ಲಿವರ್ ಡ್ಯಾಮೇಜ್ ಮಾಡುತ್ತಾ..? ಅಧ್ಯಯನ ಏನು ಹೇಳುತ್ತೆ..?

 ಹಲವಾರು ಆರೋಗ್ಯ ಪ್ರಯೋಜನ ಇರುವ, ಹಲವಾರು ಮನೆ ಮದ್ದಿಗೆ ಬಳಕೆಯಾಗುವ ಅರಿಶಿನ ಯಾರಿಗೇ ಯಾನೇ ಗೊತ್ತಿಲ್ಲ. ಹೇಳಿ ಮನೆ ಮದ್ದಿನಿಂದ ಹಿಡಿದು ಅಡುಗೆಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಅರಶಿನವನ್ನು ಬಳಕೆ ಮಾಡಲಾಗುತ್ತದೆ. ಹಸಿ ಮತ್ತು ಪುಡಿ ಮಾಡಿದ ಅರಿಶಿನ ಸರ್ವರೋಗಕ್ಕೂ ಪರಿಹಾರಕವಾಗಿದೆ ಎಂದು ಹೇಳುತ್ತಾರೆ ಹಿರಿಯರು. ಅದನೇ ಇರಲಿ ಜನರ ಹೆಚ್ಚಾಗಿ ಬಳಕೆ ಮಾಡುವ ಅರಶಿನದಿಂದ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆಯಂತೆ. ಹೌದು, ಅರಶಿನದ ಜಾಸ್ತಿ ಬಳಕೆ ಯಕೃತ್ತು ಅಥವಾ ಲಿವರ್ ಡ್ಯಾಮೇಜ್ ಉಂಟು ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಹೇಗೆ ಅರಿಶಿನ ಲಿವರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ?

ಲಿವರ್ ನಮ್ಮ ದೇಹದ ಮುಖ್ಯವಾದ ಅಂಗ. ಯಕೃತ್ತು ಇಲ್ಲದಿದ್ದರೆ ಮನುಷ್ಯನೇ ಇಲ್ಲ. ಲಿವರ್ ಗೆ ಏನಾದರು ಸಂಭವಿಸಿದರೆ ಮನುಷ್ಯನ ಪ್ರಾಣಕ್ಕೆ ಕುತ್ತು. ತಿನ್ನುವ ಆಹಾರವನ್ನು ಚಯಾಪಚಯಗೊಳಿಸುವ ಮತ್ತು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಲಿವರ್ ಗೆ ಅರಿಶಿನ ಮಾರಕವಂತೆ. ಹೌದು, ಅರಶಿನದಲ್ಲಿ ಕರ್ಕ್ಯುಮಿನ್ ಎಂಬ ಕೆಮಿಕಲ್ ವೊಂದಿದೆ. ಈ ಕೆಮಿಕಲ್ ಮನುಷ್ಯನ ಲಿವರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯಂತೆ. ಇದು ಲಿವರ್ ಅನ್ನು ಡ್ಯಾಮೇಜ್ ಮಾಡುತ್ತದೆಯಂತೆ. ಇದರ ಅತೀ ಸೇವನೆ ದೇಹದ ಮೇಲೆ ಉರಿಯೂತದ ಪರಿಣಾಮವನ್ನು ಬೀರುತ್ತದೆ, ಇದು ಯಕೃತ್ತಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.

ಏನಿದು ಕರ್ಕ್ಯುಮಿನ್..? ಕರ್ಕ್ಯುಮಿನ್ ಅನ್ನುವುದು ಅರಶಿನದಲ್ಲಿರುವ ಒಂದು ಅಂಶವಾಗಿದೆ. ಅರಶಿನಕ್ಕೆ ಹಳದಿ ಬಣ್ಣವನ್ನು ನೀಡುವುದೇ ಈ ಕರ್ಕ್ಯುಮಿನ್ ಎಂಬ ಅಂಶ. ಅರಶಿನದಲ್ಲಿರುವ ಕರ್ಕ್ಯುಮಿನ್ ಇದೀಗ ಲಿವರ್ ಮೇಲೆ ಮಾರಣಾಂತಿಕ ಸಮಸ್ಯೆ ಉಂಟು ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.
ಸಂಶೋಧನೆ ಹೇಳುವುದೇನು? ಅಮೇರಿಕನ್ ಜರ್ನಲ್ ಆಫ್ ಮೆಡಿಸಿನ್ ಪ್ರಕಟಿಸಿರುವ ಅಧ್ಯಯನದಲ್ಲಿ ಅರಿಶಿನ ಸೇವನೆಯು ಯಕೃತ್ತಿನ ಹಾನಿಗೆ ಸಂಬಂಧಿಸಿದೆ ಎಂದು ಹೇಳುತ್ತದೆ. ಸಂಶೋಧನಕಾರರು ಇಲಿ ಮೇಲೆ ಪ್ರಯೋಗ ನಡೆಸಿದ್ದು ಇದರಲ್ಲಿ ಲಿವರ್ ಮೇಲೆ ಅರಿಶಿನ ಪರಿಣಾಮ ಬೀರಿರುವುದು ದೃಢಪಟ್ಟಿದೆ. ಇಲಿಗಳಿಗೆ ನಾಲ್ಕು ಮತ್ತು ಎಂಟು ವಾರಗಳ ಅವಧಿಗೆ ಆಹಾರದಲ್ಲಿ ಕರ್ಕ್ಯುಮಿನ್ ಬೆರೆಸಿ ನೀಡಲಾಗಿತ್ತು. ಈ ಕರ್ಕ್ಯುಮಿನ್ ಇರುವ ಆಹಾರ ಸೇವಿಸಿದ ಇಲಿಗಳಿಗೆ ಲಿವರ್ ಸಮಸ್ಯೆ ಕಾಡಿದೆ. ಪ್ರಯೋಗಕ್ಕೂ ಮೊದಲು ಇಲಿಗಳು ಆರೋಗ್ಯವಾಗಿತ್ತು. ಇನ್ನು ಇಲಿಗಳ ಪೈಕಿ 8 ಇಲಿಗಳು ಕರ್ಕ್ಯುಮಿನ್ ಸೇವನೆಯಿಂದ ಲಿವರ್ ಗೆ ಹಾನಿ ಉಂಟಾಗಿತ್ತು. ಇನ್ನು, ಈ ಪೈಕಿ ಒಂದು ಇಲಿ ಸಾವನಪ್ಪಿದೆ.
ಕರ್ಕ್ಯುಮಿನ್ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನದ ಪ್ರಕಾರ, ಕರ್ಕ್ಯುಮಿನ್ ಆಹಾರವು ಪಿತ್ತರಸ ನಾಳದ ತಡೆಗಟ್ಟುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಉರಿಯೂತದ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಹಲವಾರು ರಾಸಾಯನಿಕ ಸಿಗ್ನಲಿಂಗ್ ಮಾರ್ಗಗಳೊಂದಿಗೆ ಮಧ್ಯಪ್ರವೇಶಿಸುವ ಮೂಲಕ ಯಕೃತ್ತಿನ ಕೋಶ (ಹೆಪಟೊಸೈಟ್) ಹಾನಿ ಮತ್ತು ಗುರುತು (ಫೈಬ್ರೋಸಿಸ್) ಅನ್ನು ನಿಗ್ರಹಿಸುತ್ತದೆ ಎಂದು ತಿಳಿದುಬಂದಿದೆ. ಉರಿಯೂತದ ಪಿತ್ತಜನಕಾಂಗದ ಕಾಯಿಲೆಗೆ ಪ್ರಸ್ತುತ ಚಿಕಿತ್ಸೆಯು ಉರ್ಸೋಡಿಯಾಕ್ಸಿಕೋಲಿಕ್ ಆಮ್ಲವನ್ನು ಒಳಗೊಂಡಿರುತ್ತದೆ, ಇದರ ದೀರ್ಘಾವಧಿಯ ಪರಿಣಾಮಗಳು ಅಸ್ಪಷ್ಟವಾಗಿರುತ್ತವೆ. ಇನ್ನೊಂದು ಪರ್ಯಾಯವೆಂದರೆ ಯಕೃತ್ತಿನ ಕಸಿ ಎಂದು ಸಂಶೋಧಕರು ಹೇಳಿದ್ದಾರೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries