ಬದಿಯಡ್ಕ: ಸಮಗ್ರ ಶಿಕ್ಷಾ ಕೇರಳದ ಆಶ್ರಯದಲ್ಲಿ ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ದೇಶೀಯ ಕಲಾ ಉತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಾದ ವೈನವಿ, ಭಾವನಾ ನಾಯಕ್, ಅನ್ವಿತಾ.ಟಿ, ವಿಜೇಶ್ ಕೆ, ದುರ್ಗಾ ಶಂಕರ ಅಡಿಗ ವಿಜೇತರಾಗಿ ಮಲಪ್ಪುರಂನಲ್ಲಿ ನವೆಂಬರ್ 27ರಂದು ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ರಕ್ಷಕ ಶಿಕ್ಷಕ ಸಂಘ, ಅಧ್ಯಾಪಕರು, ಸಿಬ್ಬಂಧಿ ವರ್ಗ ಅಭಿನಂದಿಸಿದೆ.
ದೇಶೀಯ ಕಲಾ ಉತ್ಸವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
0
ನವೆಂಬರ್ 26, 2022