ಉಪ್ಪಳ : ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಾದಕ ದ್ರವ್ಯ ವಿರೋಧಿ ಅಭಿಯಾನದ ಭಾಗವಾಗಿ ಹೆತ್ತವರು, ಸ್ಥಳೀಯರು, ಶಿಕ್ಷಕರು ವಿದ್ಯಾರ್ಥಿಗಳನ್ನು ಒಳಗೊಂಡು “ಮಾನವ ಸರಪಳಿ” ರಚಿಸಲಾಯಿತು. ಇದರಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಪಿ,ಟಿ.ಎ. ಅಧ್ಯಕ್ಷ ಇಬ್ರಾಹಿಂ ಅವರು ಆರೋಗ್ಯ ಮತ್ತು ನೆಮ್ಮದಿ ನಮ್ಮ ಅಂಗೈಯಲ್ಲಿದೆ. ಕ್ಷಣದ ತೃಪ್ತಿಗಾಗಿ ಮಾದಕವಸ್ತುಗಳ ಸುಳಿಗೆ ಸಿಲುಕಿ ಬದುಕು ವ್ಯಾಪಕ ಸಂಕಷ್ಟದೆಡೆಗೆ ಜಾರುವ ಬಗೆಗೆ ಅತಿ ಜಾಗರೂಕತೆ ಬೇಕು ಎಂದರು.
ಬಿ.ಆರ್.ಸಿ ಸಂಯೋಜಕ ತಿಲಕ ಮತ್ತು ದಿವ್ಯ ಉಪಸ್ಥಿತರಿದ್ದರು. ಮಾದಕ ವಸ್ತು ಗಳಿಂದ ನಮ್ಮ ಸಮಾಜವನ್ನು ಕಾಪಾಡಲು ನಾವೆಲ್ಲ ಬದ್ಧರು. ಜನಜಾಗೃತಿಗೊಳಿಸುವಲ್ಲಿ ಇಡೀ ಸಮಾಜ ಒಟ್ಟಾಗಿ ಕೈಜೋಡಿಸಬೇಕೆಂದು ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ತಿಳಿಸಿದರು. ಶಿಕ್ಷಕಿ ರೇವತಿ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಬೋಧಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಸ್ವಾಗತಿಸಿ, ಫಿರೋಜ್ ವಂದಿಸಿದರು. ಶಿಕ್ಷಕಿ ಅಬ್ಸ ನಿರ್ವಹಿಸಿದರು. ಬಳಿಕ ಶಾಲಾ ಶಿಕ್ಷಕ ವೃಂದದಿಂದ ಮಾದಕ ದ್ರವ್ಯ ವಿರೋಧಿ ಅಭಿಯಾನದ ಸಂದೇಶ ಸಾರುವ ಕಿರುನಾಟಕ ಪ್ರದರ್ಶನ ನಡೆಯಿತು.
ಮುಳಿಂಜ ಶಾಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಮಾನವ ಸರಪಳಿ
0
ನವೆಂಬರ್ 05, 2022