ನವದೆಹಲಿ:ದಾಖಲೆಯಲ್ಲಿ ಒದಗಿಸಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತನ್ನ ಸಮನ್ಸ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜಾರಿ ನಿರ್ದೇಶನಾಲಯವು(ಈಡಿ) ಜನತೆಯನ್ನು ಕೇಳಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.
ಜಾರಿ ನಿರ್ದೇಶನಾಲಯದಿಂದ ನಕಲಿ ಸಮನ್ಸ್ ಮೂಲಕ ಜಪಾನಿನ ಪೇಂಟ್-ತಯಾರಿಕ ಕಂಪನಿ ನಿಪ್ಪಾನ್‌ನ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ 10 ಶಂಕಿತ ಗ್ಯಾಂಗ್ ಸದಸ್ಯರನ್ನು ಬಂಧಿಸಿದ ನಂತರ ಈಡಿ ಈ ಸಲಹೆ ನೀಡಿದೆ.
ಪ್ರಕರಣವನ್ನು ಇತ್ಯರ್ಥಪಡಿಸುವ ಭರವಸೆಗೆ ಪ್ರತಿಯಾಗಿ ಗ್ಯಾಂಗ್ ಸದಸ್ಯರು ಕಂಪೆನಿ ಅಧಿಕಾರಗಳಿಂದ 15-20 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಈಡಿ ತಿಳಿಸಿದೆ.
"ಅಂತರ-ರಾಜ್ಯ ಗ್ಯಾಂಗ್ ಸಕ್ರಿಯವಾಗಿದೆ ಹಾಗೂ ಸಮಾಜದ ಉನ್ನತ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಅವರಿಗೆ ನಕಲಿ ಸಮನ್ಸ್ / ನೋಟಿಸ್ ಕಳುಹಿಸುವ ಮೂಲಕ ಈಡಿ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದೆ" ಎಂದು ಸಂಸ್ಥೆ ನವೆಂಬರ್ 21 ರಂದು ಪ್ರಕಟನೆಯಲ್ಲಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.