HEALTH TIPS

ಹಾಲಿನ ದರದಲ್ಲಿ ಹೆಚ್ಚಳ: ರೈತರಿಗೆ ಸಂಪೂರ್ಣ ಲಾಭ; ದರ ಹೆಚ್ಚಿಸಿದರೆ ಕಲಬೆರಕೆ ಹಾಲು ತಡೆಯಬಹುದು: ಸಚಿವೆ ಚಿಂಚುರಾಣಿ


          ತಿರುವನಂತಪುರ: ಬೆಲೆ ಏರಿಕೆಯ ಸಂದರ್ಭದಲ್ಲಿ ಕಲಬೆರಕೆ ಹಾಲು ಬರದಂತೆ ಗಡಿಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು ಎಂದು ಸಚಿವೆ ಜೆ. ಚಿಂಚುರಾಣಿ ಹೇಳಿರುವರು.
         ರೈತರು ಹೈನುಗಾರಿಕೆಯಿಂದ ಹಿಂದೆ ಸರಿಯುತ್ತಿರುವುದರಿಂದ ರೈತರನ್ನು ಸೆಳೆಯಲು ನಾನಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೇವಿನ ಹುಲ್ಲಿನ ಕೃಷಿಯನ್ನು ವಿಸ್ತರಿಸಲಾಗುವುದು ಮತ್ತು ಮೂಡಲಮಾಡದಲ್ಲಿ ಪ್ರಾಯೋಗಿಕವಾಗಿ ನಡೆಸಿದ ಜೋಳದ ಕೃಷಿಯನ್ನು ಕೇರಳದಲ್ಲಿ ವಿಸ್ತರಿಸಲಾಗುವುದು ಎಂದು ಸಚಿವರು ಪ್ರಸ್ತಾಪಿಸಿದರು. ಬೇರೆ ರಾಜ್ಯಗಳ ಮೇವು ಉತ್ತಮ ಗುಣಮಟ್ಟದ್ದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಲಾಗಿದೆ.
        ಕಲಬೆರಕೆ ಹಾಲು ಮಾರಾಟಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಎಚ್ಚರಿಕೆ ನೀಡಿದ್ದಾರೆ. ಕ್ಯಾಲ್ಸಿಯಂ ಕೊರತೆಯಿಂದ ದುರ್ಬಲವಾಗಿರುವ ಹಸುಗಳಿಗೆ ಚಿಕಿತ್ಸೆ ನೀಡಲು ಹೆಚ್ಚಿನ ಕಾರ್ಯವಿಧಾನಗಳನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಚಿಂಚುರಾಣಿ ತಿಳಿಸಿದರು.
           ಡಿಸೆಂಬರ್ 1ರಿಂದ ಮಿಲ್ಮಾ ಹಾಲಿನ ದರ ಏರಿಕೆಯಾಗಲಿದೆ. ಲೀಟರ್‍ಗೆ 6 ರೂ. ಏರಿಕೆಯಾಗಿದೆ. ಮಿಲ್ಮಾ ನೇಮಿಸಿದ್ದ ತಜ್ಞರ ಸಮಿತಿಯ ಶಿಫಾರಸ್ಸು ಹಾಲಿನ ದರವನ್ನು 8.57 ರೂ.ಗೆ ಹೆಚ್ಚಿಸಲು ಸೂಚಿಸಿತ್ತು. ಹೈನುಗಾರರ ನಷ್ಟದಿಂದ ಬೆಲೆ ಏರಿಕೆಯಾಗಿದೆ ಎಂದೂ ತಜ್ಞರ ಸಮಿತಿ ಹೇಳಿತ್ತು. ಸರ್ಕಾರ ಘೋಷಿಸಿದ ಸವಲತ್ತುಗಳು ರೈತರಿಗೆ ಸಿಗುತ್ತಿಲ್ಲ ಎಂಬ ಬಲವಾದ ಆರೋಪವಿದೆ. ಸವಲತ್ತುಗಳನ್ನು ನೇರವಾಗಿ ಪಡೆಯಬೇಕೆಂಬುದು ರೈತರ ಆಗ್ರಹವಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries