ಕಾಸರಗೋಡು: ಕಾಶಿ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀದೇವರ ದರ್ಶನಪಡೆದು ಊರಿಗೆ ವಾಪಸಾಗುವ ಮಧ್ಯೆ ಮಧೂರು ಪಂಚಾಯಿತಿ ಮನ್ನಿಪ್ಪಾಡಿ ವಿವೇಕಾನಂದನಗರ ನಿವಾಸಿ ಧೂಮಪ್ಪ ಯಾನೆ ಕೊರಗಪ್ಪ ಗಟ್ಟಿ(62)ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಟೋ ಚಾಲಕರಾಗಿದ್ದ ಇವರು, ಕೂಡ್ಲು ಮನ್ನಿಪ್ಪಾಡಿಯಲ್ಲಿ ಮಿಲ್ಮಾ ಬೂತ್ ನಡೆಸುತ್ತಿದ್ದರು. ಪ್ಯಾಕೇಜ್ ಟೂರ್ ಅನ್ವಯ ದೇಗುಲ ಸಂದರ್ಶನಕ್ಕಾಗಿ ಕಾಸರಗೋಡಿನಿಂದ ಇತರ ಪ್ರವಾಸಿಗರ ಜತೆ ಟೂರಿಸ್ಟ್ ಬಸ್ಸಿನಲ್ಲಿ ತೆರಳಿದ್ದ ಇವರು, ಸೋಮವಾರ ಕಾಶಿಯಲ್ಲಿ ಗಂಗಾಸ್ನಾನ ಮಾಡಿ, ದೇವರ ದರ್ಶನ ಕಳೆದು ಹೊರಬರುತ್ತಿದ್ದಂತೆ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಊರಿಗೆ ತರಲಾಗುತ್ತಿದೆ. ಅವರು ಪತ್ನಿ ಮೂವರು ಮಕ್ಕಳನ್ನು ಅಗಲಿದ್ದಾರೆ.
ಕಾಶಿ ಕ್ಷೇತ್ರ ಸಂದರ್ಶಿಸಿ ವಾಪಸಗುವ ಮಧ್ಯೆ ಹೃದಯಾಘಾತದಿಂದ ನಿಧನ
0
ನವೆಂಬರ್ 09, 2022
Tags