ಕಾಸರಗೋಡು : ಹೋಟೆಲ್ ಉದ್ಯಮಿ, ಕಲಾಪೆÇೀಷಕ, ಕನ್ನಡ ಹೋರಾಟಗಾರ ರಾಮಪ್ರಸಾದ್ ಕಾಸರಗೋಡು ಅವರ 60ನೇ ವಸಂತೋತ್ಸವ ಅಭಿನಂದನೆ ಕಾರ್ಯಕ್ರಮ ಮತ್ತು ಕಾಸರಗೋಡು ಯಕ್ಷೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ಜರುಗಿತು.
ರಾಮಪ್ರಸಾದ್ ಕಾಸರಗೋಡು 60-ಅಭಿನಂದನಾ ಸಮಿತಿ ವತಿಯಿಂದ ನಡೆದ ಸಮಾರಂಭದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಹಿರಿಯ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯಗಳ ಗಣ್ಯರಾದ ಶಿವರಾಮ ಕಾಸರಗೋಡು, ಕೆ.ಭಾಸ್ಕರ, ಲವ ಮೀಪುಗುರಿ, ವೀಜಿ. ಕಾಸರಗೋಡು, ಶ್ರೀಕಾಂತ್ ಕಾಸರಗೋಡು, ಶ್ರೀಲತಾ ಟೀಚರ್, ಪುμÁ್ಪ ಮೊದಲಾದವರು ಇದ್ದರು. ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಪಿ.ದಿವಾಕರ್ ವಂದಿಸಿದರು.
30ರಂದು ರಾಮಪ್ರಸಾದ್ ಕಾಸರಗೋಡು ಷಷ್ಠ್ಯಬ್ಧಿ ಕಾರ್ಯಕ್ರಮ ಮತ್ತು ಕಾಸರಗೋಡು ಯಕ್ಷೋತ್ಸವ
ಹೋಟೆಲ್ ಉದ್ಯಮಿ, ಕಲಾಪೆÇೀಷಕ, ಕನ್ನಡ ಹೋರಾಟಗಾರ ರಾಮಪ್ರಸಾದ್ ಕಾಸರಗೋಡು ಅವರ ಷಷ್ಠ್ಯಬ್ಧಿ ಕಾರ್ಯಕ್ರಮ ಮತ್ತು ಕಾಸರಗೋಡು ಯಕ್ಷೋತ್ಸವ ಸಮಾರಂಭ ನ.30ರಂದು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಾಲಯ ಆವರಣದಲ್ಲಿ ನಡೆಯಲಿದೆ. ರಾಮಪ್ರಸಾದ್ ಕಾಸರಗೋಡು 60-ಅಭಿನಂದನೆ ಸಮಿತಿ ವತಿಯಿಂದ ಅಂದು ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀಗಳಾದ ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ, ಕುಂಟಾರು ರವೀಶ ತಂತ್ರಿ, ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ, ಕಟೀಲಿನ ವೇದಮೂರ್ತಿ ಕೆ.ಕಮಲಾದೇವಿ ಪ್ರಸಾದ ಆಸ್ರಣ್ಣ , ಕರ್ನಾಟಕ ಸಂಸ್ಕøತಿ ಸಚಿವ ವಿ.ಸುನಿಲ್ ಕುಮಾರ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಉದುಮಾ ಶಾಸಕ ಸಿ.ಎಚ್.ಕುಂಞಂಬು, ನಗರಸಭೆ ಸದಸ್ಯೆ ಶ್ರೀಲತಾ ಎಂ., ಕರ್ನಾಟಕ ಲೋಕ ಸೇವಾ ಆಯೋಗ ಮಾಜಿ ಕಾರ್ಯದರ್ಶಿ ಟಿ.ಶ್ಯಾಮ ಭಟ್, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ ಎಂ.ಮೂಡಬಿದಿರೆ, ಬಿಎಂಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ಮುರಳೀಧರನ್, ಕೇರಳ ಹೋಟೆಲ್ ಮತ್ತು ರೆಸ್ಟಾರೆಂಟ್ ಜಿಲ್ಲಾ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ, ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಕೇರಳ ರಾಜ್ಯ ಸಮಿತಿ ಉಪಾಧ್ಯಕ್ಷ ಅರವಿಂದ ಕುಮಾರ್ ಅಲೆವೂರಾಯ ನೇರಪ್ಪಾಡಿ, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಕೆ.ಟಿ.ಸುಬ್ರಹ್ಮಣ್ಯ ಅತಿಥಿಗಳಾಗಿರುವರು. ರಾತ್ರಿ 8 ಗಂಟೆಗೆ ಸಾಧಕರಿಗೆ ಸನ್ಮಾನ ನಡೆಯಲಿದೆ. ನಂತರ ಕಾಸರಗೋಡು ಯಕ್ಷೋತ್ಸವ ಅಂಗವಾಗಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಇವರಿಂದ ಮೇದಿನಿ ನಿರ್ಮಾಣ-ಮಹಿಷ ಮರ್ದಿನಿ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ವಸಂತೋತ್ಸವ ಅಭಿನಂದನೆ-ಕಾಸರಗೋಡು ಯಕ್ಷೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
0
ನವೆಂಬರ್ 19, 2022