ಮುಳ್ಳೇರಿಯ: ಕುಂಬಳೆ-ಮುಳ್ಳೇರಿಯ ರಸ್ತೆಯ ಕಳಪೆ ಕಾಮಗಾರಿಯಿಂದಾಗಿ ಭಾನುವಾರ ರಾತ್ರಿ ಸ್ಲಾಬ್ ಮುರಿದು ಲಾರಿ ಹೊಂಡದಲ್ಲಿ ಸಿಲುಕಿದ ಘಟನೆ ಮುಳ್ಳೇರಿಯ ಪೇಟೆಯಲ್ಲಿ ಜರಗಿದೆ.
ಕುಂಬಳೆಯಿಂದ ಮುಳ್ಳೇರಿಯವರೆಗಿನ ರಸ್ತೆಯ ಕಾಮಗಾರಿ 100 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಆದರೆ ಎಲ್ಲ ಕಡೆಯೂ ಕಳಪೆ ಕಾಮಗಾರಿ ನಡೆಯುತ್ತಿದೆಯೆಂದು ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ವಾರಿಜಾಕ್ಷನ್ ಹೇಳಿದ್ದಾರೆ. ಈ ಬಗ್ಗೆ ಸÀರ್ಕಾರ ತನಿಖೆ ನಡೆಸಬೇಕು.ಇಲ್ಲವಾದರೆ ಭಾರೀ ಪ್ರತಿಭಟನೆ ನಡೆಸಬೇಕಾದೀತು ಎಂದು ಕಾಂಗ್ರೆಸ್ ಬ್ಲಾಕ್ ಸಮಿತಿ ಎಚ್ಚರಿಕೆ ನೀಡಿದೆ. ಈ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ಪುರುμÉೂೀತ್ತಮನ್, ಬಲರಾಮನ್ ನಾಯರ್, ರೂಪ, ವೇಣು ಕುಂಟಾರು, ರಂಜಿತ್ ಕುಮಾರ್, ಚಂದ್ರನ್, ಜಯಕೃಷ್ಣನ್, ಇಬ್ರಾಹಿಂ ಹಾಜಿ ಮೊದಲಾದವರು ಭಾಗವಹಿಸಿದರು.
ಮುಳ್ಳೇರಿಯ-ಕುಂಬಳೆ ರಸ್ತೆಯ ಕಳಪೆ ಕಾಮಗಾರಿ: ಸ್ಲಾಬ್ ಮುರಿದು ಹೊಂಡದಲ್ಲಿ ಸಿಲುಕಿದ ಲಾರಿ, ಕಾಂಗ್ರೆಸ್ ಪ್ರತಿಭಟನೆ
0
ನವೆಂಬರ್ 28, 2022
Tags