HEALTH TIPS

ಪೋಲೀಸರಿಂದ 'ವಾಚ್ ಯುವರ್ ನೈಬರ್' ಯೋಜನೆ: ನಿಮ್ಮ ನೆರೆಹೊರೆಯವರನ್ನು ನಿರೀಕ್ಷಿಸಲು ಡಿಜಿಪಿ ಕರೆ


              ಕೊಚ್ಚಿ: ರೆಸಿಡೆನ್ಸ್ ಅಸೋಸಿಯೇಷನ್ ಗಳ ಸಹಯೋಗದಲ್ಲಿ ಪೋಲೀಸರ ನೇತೃತ್ವದಲ್ಲಿ ‘ವಾಚ್ ಯುವರ್ ನೈಬರ್’ ಯೋಜನೆ ಜಾರಿಗೊಳಿಸಲಾಗುವುದು ಎಂದು ಡಿಜಿಪಿ ಅನಿಲ್‍ಕಾಂತ್ ತಿಳಿಸಿದ್ದಾರೆ.
             ನೆರೆಹೊರೆಯಲ್ಲಿ ಏನಾದರೂ ಅಸಹಜವಾದದ್ದು ಕಂಡುಬಂದರೆ ಪೋಲೀಸರಿಗೆ ತಿಳಿಸುವುದು ಯೋಜನೆಯಾಗಿದೆ. ಜನಮೈತ್ರಿ ಪೋಲೀಸರ ಅಂಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಪರಾಧ ತಡೆಯುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
            ಕೊಚ್ಚಿಯಲ್ಲಿ ರೆಸಿಡೆನ್ಸ್ ಅಸೋಸಿಯೇಶನ್ ಪದಾಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಹೊಸ ಯೋಜನೆ ಜಾರಿಗೊಳಿಸಲಾಗುವುದು ಎಂದು ಡಿಜಿಪಿ ಮಾಹಿತಿ ನೀಡಿದರು. ಮಾದಕ ದ್ರವ್ಯ ಸೇವಿಸುವವರನ್ನು ಪತ್ತೆ ಹಚ್ಚಲು ಶಾಲಾ-ಕಾಲೇಜುಗಳನ್ನು ಕೇಂದ್ರೀಕರಿಸುವ ಆ್ಯಂಟಿ ನಾರ್ಕೋಟಿಕ್ ಸೆಲ್‍ನ ಜಾಗೃತಿ ಕಾರ್ಯಕ್ರಮಗಳನ್ನು ನಿವಾಸ ಸಂಘಗಳ ಮೂಲಕ ಪ್ರಚುರಗೊಳಿಸಲು ಚರ್ಚೆಯಲ್ಲಿ ನಿರ್ಧರಿಸಲಾಯಿತು.
           ಮನೆ, ಸಂಸ್ಥೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವವರು ರಸ್ತೆಯಲ್ಲಿನ ದೃಶ್ಯಗಳನ್ನು ಅನುಕೂಲವಾಗುವ ರೀತಿಯಲ್ಲಿ ಅಳವಡಿಸಲು ಗಮನಹರಿಸಬೇಕು ಎಂದು ಡಿಜಿಪಿ ಹೇಳಿದರು. ಅಲ್ಲದೆ ಅಗತ್ಯ ಸಮಯದಲ್ಲಿ ದೂರವಾಣಿ ಕರೆ ಮಾಡಿದಾಗ ಪೋಲೀಸರ ಸ್ಪಂದನೆಯನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಪ್ರಸ್ತುತ, ಪೋಲೀಸ್ ಸೇವೆಗಳಿಗಾಗಿ ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಿದರೆ, ಏಳು ನಿಮಿಷಗಳಲ್ಲಿ  ಪ್ರತಿಕ್ರಿಯೆ ಸಿಗುತ್ತದೆ, ಪೋಲೀಸರು ಈ ಸಮಯವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
           ಹಿರಿಯ ನಾಗರಿಕರ ಕಲ್ಯಾಣ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವೃದ್ಧರನ್ನು ಆರೋಗ್ಯವಂತರು, ಒಳರೋಗಿಗಳು ಮತ್ತು ವಿಶೇಷ ಆರೈಕೆಯ ಅಗತ್ಯವಿರುವವರು ಎಂದು ವರ್ಗೀಕರಿಸುವ ಮೂಲಕ ಪೋಲೀಸರು ವೃದ್ಧರ ಮಾಹಿತಿಯನ್ನು ಸಂಗ್ರಹಿಸುತ್ತಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries