ನವದೆಹಲಿ: ಕೋಝಿಕ್ಕೋಡ್ ಅವಳಿ ಸ್ಫೋಟ ಪ್ರಕರಣದ ಮೊದಲ ಆರೋಪಿ ತಡಿಯಂತವಿಟ ನಾಸೀರ್ ಮತ್ತು ನಾಲ್ಕನೇ ಆರೋಪಿ ಶಿಫಾಸ್ ಟಿನ್ನು ಖುಲಾಸೆಗೊಳಿಸಿದ ವಿರುದ್ಧದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಎನ್ಐಎ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ರಿಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು ನೋಟಿಸ್ ಕಳುಹಿಸಿದೆ.
2006ರಲ್ಲಿ ಕೋಝಿಕ್ಕೋಡ್‍ನ ಮೊಫುಸಲ್ ಬಸ್ ನಿಲ್ದಾಣ ಮತ್ತು ಕೆಎಸ್‍ಆರ್‍ಟಿಸಿ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿತ್ತು. ಪ್ರಕರಣದಲ್ಲಿ ತಡಿಯಂತವಿಟ ನಾಸೀರ್ ಮತ್ತು ಶಿಫಾಸ್‍ಗೆ ದ್ವಿ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಅಪರಾಧದಲ್ಲಿ ಆರೋಪಿಗಳ ಪಾತ್ರವನ್ನು ಅನುಮಾನಾಸ್ಪದವಾಗಿ ಸಾಬೀತುಪಡಿಸಲು ಎನ್‍ಐಎಗೆ ಸಾಧ್ಯವಾಗಲಿಲ್ಲ ಎಂದು ಹೈಕೋರ್ಟ್ ಆರೋಪಿಗಳನ್ನು ಬಿಡುಗಡೆ ಮಾಡಿತ್ತು. ಸಾಕ್ಷಿ ಶಮ್ಮಿ ಫಿರೋಜ್ ಹೇಳಿಕೆಯ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ ಎಂದು ನ್ಯಾಯಾಲಯ ಗಮನಿಸಿದೆ.
ಇದೇ ವೇಳೆ ಎನ್‍ಐಎ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟ್ಟಿ ಅವರು ಸುಪ್ರೀಂ ಕೋರ್ಟ್‍ನಲ್ಲಿ ವಾದ ಮಂಡಿಸಿ, ಇಬ್ಬರ ವಿರುದ್ಧವೂ ಸಾಕ್ಷ್ಯ ಮತ್ತು ದೂರವಾಣಿ ದಾಖಲೆಗಳಿವೆ. ಹೈಕೋರ್ಟ್ ತೀರ್ಪು ಈ ವಿಷಯವನ್ನು ಪರಿಗಣಿಸಿಲ್ಲ ಎಂದು ಸೂಚಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2009 ರವರೆಗೆ, ಕ್ರೈಂ ಬ್ರಾಂಚ್ ಕೋಝಿಕ್ಕೋಡ್ ಅವಳಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿತ್ತು. 2010ರಲ್ಲಿ ಕೇಂದ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಎನ್‍ಐಎ ತನಿಖೆಯ ಜವಾಬ್ದಾರಿ ವಹಿಸಿಕೊಂಡಿತ್ತು. ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದ ಎನ್‍ಐಎ ನ್ಯಾಯಾಲಯದ ಆದೇಶದ ವಿರುದ್ಧ ಆರೋಪಿಗಳು ಹೈಕೋರ್ಟ್‍ಗೆ ಮೊರೆ ಹೋಗಿದ್ದು, ಅವರನ್ನು ಖುಲಾಸೆಗೊಳಿಸಲಾಗಿತ್ತು.
ಕೋಝಿಕ್ಕೋಡ್ ಅವಳಿ ಸ್ಫೋಟ ಪ್ರಕರಣ: ಆರೋಪಿಗಳ ವಿರುದ್ಧ ಎನ್.ಐ.ಎ ಬಳಿ ಸಾಕ್ಷ್ಯ-ಪೋನ್ ದಾಖಲೆಗಳು: ಆರೋಪಿಗಳ ಬಿಡುಗಡೆ ವಿರುದ್ಧ ಮನವಿ ಮತ್ತು ನೋಟಿಸ್ ಕಳುಹಿಸಿದ ಸುಪ್ರಿಂ
0
ನವೆಂಬರ್ 17, 2022