HEALTH TIPS

ಹೊರ ರಾಜ್ಯದ ಕಾರ್ಮಿಕರಲ್ಲಿ ಡ್ರಗ್ಸ್ ಬಳಕೆ ಹೆಚ್ಚಳ:ಆಗಾಗ ಊರಿಗೆ ತೆರಳಿ ಮರಳುವುದು ಮಾದಕ ವಸ್ತುಗಳೊಂದಿಗೆ: ಅಬಕಾರಿ ಪೋಲೀಸ್


               ಕುಂಬಳೆ: ರಾಜ್ಯಾದ್ಯಂತ ಹೆಚ್ಚಳಗೊಂಡಿರುವ ವ್ಯಾಪಕ ಮಾದಕವಸ್ತು ಜಾಲದ ಹಿಂದೆ ಅನ್ಯರಾಜ್ಯ ಕಾರ್ಮಿಕರ ಬೃಹತ್ ತಂಡ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ನಿಟ್ಟಿನ ವರದಿ ಆಧರಿಸಿ ಅಬಕಾರಿ ಮತ್ತು ಪೋಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
          ಮಾದಕವಸ್ತು ಸೇವನೆಯ ಬಳಿಕ ಅನ್ಯರಾಜ್ಯ ಕಾರ್ಮಿಕÀರಲ್ಲಿ ಕ್ರಿಮಿನಲ್ ಪ್ರವೃತ್ತಿಗಳು ಹೆಚ್ಚಾಗುತ್ತವೆ ಎಂದು ವರದಿಯಾಗಿದೆ. ಅವರಲ್ಲಿ ಧೂಮಪಾನ ಚಟ ಕಡಿಮೆಯಾಗುತ್ತಿದ್ದರೂ ಅಮಲು ಪದಾರ್ಥಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.
          ಅನೇಕ ವಲಸೆ ಕಾರ್ಮಿಕರು ಗಾಂಜಾ ಮತ್ತು ಅಕ್ರಮ ಮಾದಕ ದ್ರವ್ಯಗಳನ್ನು ಬಳಸುತ್ತಾರೆ. ಮೊದಲು ಡ್ರಗ್ಸ್ ನೀಡಿ ಡ್ರಗ್ಸ್ ಮಾಫಿಯಾ ಬಲೆಗೆ ಬೀಳುತ್ತಾರೆ. ನಂತರ ಅವರು ಮಾದಕ ವಸ್ತುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೇರೆ ರಾಜ್ಯಗಳಿಂದ ಡ್ರಗ್ಸ್ ಸರಬರಾಜು ಮಾಡುವ ಬೃಹತ್ ಜಾಲಗಳಿವೆ. ಅವರು ಆಗಾಗ್ಗೆ ತಮ್ಮ ರಾಜ್ಯಗಳಿಗೆ ತೆರಳಿ  ನಂತರ ಗಾಂಜಾದೊಂದಿಗೆ ಕೇರಳಕ್ಕೆ ಹಿಂತಿರುಗುತ್ತಾರೆ.
         ಡ್ರಗ್ಸ್ ಬಳಕೆಯಲ್ಲೂ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಗಾಂಜಾದ ಜೊತೆಗೆ ಉನ್ಮಾದವನ್ನು ಉಂಟುಮಾಡಲು ಅವರು ಎಲ್.ಎಸ್.ಡಿ ಸ್ಟಾಂಪ್‍ಗಳು, ಮಾದಕ ಮಾತ್ರೆಗಳು ಮತ್ತು ಅಮಲೇರಿಸುವ ಟಿಂಕ್ಚರ್‍ಗಳನ್ನು ಬಳಸುತ್ತಾರೆ.
          ಅನ್ಯರಾಜ್ಯ ಕಾರ್ಮಿಕರಲ್ಲಿ ಗಾಂಜಾ ಅತ್ಯಂತ ಜನಪ್ರಿಯ ಮಾದಕವಸ್ತುಗಳಾಗಿವೆ. ಇತರೆ ವಿದೇಶಿ ಡ್ರಗ್ಸ್ ಗಳಿಗೆ ಹೋಲಿಸಿದರೆ, ದೇಶದಲ್ಲಿ ಗಾಂಜಾ ಅಗ್ಗವಾಗಿದ್ದು, ಸುಲಭವಾಗಿ ಸಿಗುತ್ತಿರುವುದೇ ಗಾಂಜಾ ಮೇಲಿನ ಪ್ರೀತಿ ಹೆಚ್ಚಾಗಲು ಕಾರಣ. ಮಾದಕ ವಸ್ತುಗಳನ್ನು ಖರೀದಿಸಲು ಹಣ ಗಳಿಸಲು ಅನೇಕ ಜನರು ಮನೆಗಳಿಗೆ ಕನ್ನ ಹಾಕುತ್ತಾರೆ ಮತ್ತು ಆಭರಣ ಸೇರಿದಂತೆ ಸಂಸ್ಥೆಗಳನ್ನು ದರೋಡೆ ಮಾಡುತ್ತಾರೆ. ಇತ್ತೀಚಿನ ಕಳ್ಳತನ ಪ್ರಕರಣಗಳಲ್ಲಿ ಅರ್ಧದಷ್ಟು ಆರೋಪಿಗಳು ಬೇರೆ ರಾಜ್ಯಗಳಿಂದ ಬಂದವರು.

         ಅನ್ಯರಾಜ್ಯ ಕಾರ್ಮಿಕರಲ್ಲಿ ಮಾದಕ ವಸ್ತುಗಳ ಸೇವನೆ ವ್ಯಾಪಕವಾದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಕವಚ ಎಂಬ ಮಾದಕ ವಸ್ತು ವಿರೋಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಸಹಯೋಗದಲ್ಲಿ ಅವರಿಗಾಗಿ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರಗಳಿಗೆ ಭೇಟಿ ನೀಡುವ ಎ.ಎಲ್.ಒ ಗಳಿಗೆ ಸಹಾಯ ಮಾಡಲು ಅತಿಥಿ ಕಾರ್ಮಿಕರಲ್ಲಿ ಸ್ವಯಂಸೇವಕರನ್ನು ಹುಡುಕಿ ತರಬೇತಿ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries