ಕಾಸರಗೋಡು: ರಾಷ್ಟ್ರೀಯ ಮಾಧ್ಯಮ ದಿನದಂದು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿಯು ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸುದ್ದಿ ಬರವಣಿಗೆ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ. ನಬೀಲ್ ಅಹಮ್ಮದ್ ರಶೀದ್ (ಸರ್ಕಾರಿ ಕಾಲೇಜು ಕಿನಾನೂರು ಕರಿಂದಳಂ) ಪ್ರಥಮ ಸ್ಥಾನ ಪಡೆದುಕೊಂಡರು. ಎಂ. ವಿ. ಕೃಷ್ಣಪ್ರಿಯ (ಸರ್ಕಾರಿ ಕಾಲೇಜು ಕಿನಾನೂರು ಕರಿಂದಳಂ) ದ್ವಿತೀಯ ಹಾಗೂ ಎಸ್. ಖದೀಜತ್ ಸಫ್ವಾನ (ಸರ್ಕಾರಿ ಕಾಲೇಜು ಕಾಸರಗೋಡು) ತೃತೀಯ ಸ್ಥಾನ ಪಡೆದರು. ವಿಜೇತರಿಗೆ ನವೆಂಬರ್ 23 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಬಹುಮಾನ ವಿತರಣೆ ನಡೆಯಲಿರುವುದಾಘಿ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಮಾಧ್ಯಮ ದಿನ: ಸುದ್ದಿ ಬರವಣಿಗೆ ಸ್ಪರ್ಧಾ ವಿಜೇತರು
0
ನವೆಂಬರ್ 23, 2022
Tags