ಕಾಸರಗೋಡು:, ಮೂಲಭೂತ ಹಕ್ಕುಗಳಂತೆ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಜವಾಬ್ದಾರಿ ಇದ್ದು, ಎಲ್ಲ ಕಾನೂನುಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತವೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಸಿ.ಕೃಷ್ಣಕುಮಾರ್ ತಿಳಿಸಿದರು.
. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಾನೂನು ಅರಿವು ಕಾರ್ಯಕ್ರಮ 'ಹಕ್-ಹಮಾರಾ-ಭಿ-ತೋ ಹ@ 75' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಯ ಹಕ್ಕು ಸಂವಿಧಾನ ನೀಡಿರುವ ಬಹುಮುಖ್ಯ ಹಕ್ಕು. ಒಬ್ಬ ವ್ಯಕ್ತಿಯ ಶ್ರೇಣಿ ಅಥವಾ ಶಿಕ್ಷಣವು ಅಲ್ಲಿ ಒಂದು ಅಂಶವಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಅಭಿವ್ಯಕ್ತಿ ಸ್ವಾತಂತ್ರ್ಯವೂ ಅμÉ್ಟೀ ಮುಖ್ಯ. ಆದರೆ ಇಂದು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಇಂತಹ ತರಗತಿಗಳು ತುಂಬಾ ಉಪಯುಕ್ತವಾಗಿವೆ ಎಂದರು.
ಜಿಲ್ಲೆಯ ಸಮಾಜ ವಿಜ್ಞಾನ ಶಿಕ್ಷಕರಿಗೆ ನಡೆಸಿದ ಕಾನೂನು ಅರಿವು ತರಗತಿಯಲ್ಲಿ ಮೂಲಭೂತ ಹಕ್ಕು ಹಾಗೂ ಜವಾಬ್ದಾರಿ ಕುರಿತು ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ಅನಂತಕೃಷ್ಣ ಭಟ್ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ವಿಷಯದ ಕುರಿತು ತರಗತಿ ತೆಗೆದುಕೊಂಡರು. ಕಾಸರಗೋಡು ವಕೀಲರ ಸಂಘದ ಅಧ್ಯಕ್ಷ ಅಡ್ವ.ಎಂ.ನಾರಾಯಣ ಭಟ್, ವಕೀಲರ ಸಂಘದ ಸದಸ್ಯ ಅಡ್ವ.ಕರುಣಾಕರನ್ ನಂಬಿಯಾರ್ ಮಾತನಾಡಿದರು. ಕಾಸರಗೋಡು ಉಪನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಬಿ.ಕರುಣಾಕರನ್ ಸ್ವಾಗತಿಸಿ, ಡಿಎಲ್ ಎಸ್ ಎ ಸೆಕ್ಷನ್ ಆಫೀಸರ್ ಕೆ.ದಿನೇಶ ವಂದಿಸಿದರು.
ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹಕ್-ಹಮಾರಾ-ಭಿ-ತೋ ಹ @ 75' ಅನ್ನು ನಡೆಸಲಾಗುತ್ತಿದೆ. ನವೆಂಬರ್ 13ರವರೆಗೆ ಅಭಿಯಾನ ನಡೆಯಲಿದೆ.