ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕೃತ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‍ಎಲ್‍ಇಎಂ) The National List of Essential Medicines(NLEM) ಯಲ್ಲಿ ಹೃದಯ ನಾಳದ ಸ್ಟೆಂಟ್‍ಗಳನ್ನು ಹೊಸದಾಗಿ ಸೇರಿಸಿದೆ. ಈ ಕ್ರಮದಿಂದ ಈ ಜೀವರಕ್ಷಕ ವೈದ್ಯಕೀಯ ಸಾಧನದ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು timesofindia.com ವರದಿ ಮಾಡಿದೆ.
ಅಗತ್ಯತೆ ಆಧಾರದಲ್ಲಿ ಸ್ಟೆಂಟ್‍ಗಳನ್ನು ಪಟ್ಟಿಯಲ್ಲಿ ಸೇರಿಸುವ ಸಂಬಂಧ ಅಧ್ಯಯನ ನಡೆಸಲು ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (ಎನ್‍ಪಿಪಿಎ) The National Pharmaceutical Pricing Authority (NPPA) ಇದೀಗ ಹೃದಯನಾಳದ ಸ್ಟೆಂಟ್‍ಗೆ ಬೆಲೆ ನಿಗದಿಪಡಿಸಬೇಕಾಗಿದೆ.
ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಪರಾಮರ್ಶೆ ಮತ್ತು ಪರಿಷ್ಕರಣೆಗಾಗಿ ರಾಷ್ಟ್ರೀಯ ವೈದ್ಯಕೀಯ ಸ್ಥಾಯಿ ಸಮಿತಿಯನ್ನು 2018ರಲ್ಲಿ ರಚಿಸಿತ್ತು. ಸಮಿತಿ ತನ್ನ ವರದಿಯನ್ನು ಸೆ. 9ರಂದು ಸಲ್ಲಿಸಿದ್ದು, ಇದನ್ನು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ಇತೀಚೆಗೆ ಬಿಡುಗಡೆ ಮಾಡಿದ ಅಧಿಸೂಚನೆ ವಿವರಿಸಿದೆ.
ಅಂತೆಯೇ ಬೇರ್ ಮೆಟಲ್ ಸ್ಟೆಂಟ್ (ಬಿಎಂಎಸ್) Bare Metal Stents (BMS) ಹಾಗೂ ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ (ಡಿಇಎಸ್) Drug Eluting Stents (DES) ಸಾಧನಗಳನ್ನು ಪಟ್ಟಿಗೆ ಸೇರಿಸಲು ಎನ್‍ಸಿಎನ್‍ಎಂ ಶಿಫಾರಸ್ಸು ಮಾಡಿದೆ. ಇದನ್ನು ಆರೋಗ್ಯ ಸಚಿವಾಲಯ ಒಪ್ಪಿಕೊಂಡಿದೆ ಎಂದು ಎಂದು ಅಧಿಸೂಚನೆ ಹೇಳಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.