ಬದಿಯಡ್ಕ: ಮಾನ್ಯ ಸನಿಹದ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆ ಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಜರಗಿತು. ಸಮಿತಿಯ ಗೌರವ ಸಲಹೆಗಾರ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಉದ್ಘಾಟಿಸಿದರು.
ಈ ಸಂದಭರ್Àದಲ್ಲಿ ಶ್ರೀ ಕ್ಷೇತ್ರದ ಗರ್ಭಗುಡಿ ಹಾಗೂ ತೀರ್ಥ ಮಂಟಪದ ಕಾಮಗಾರಿಯನ್ನು ಶಿಲ್ಪಿ ವಿಜಯ ಉಪ್ಪಿನಂಗಡಿ ಅವರಿಗೆ ವಹಿಸಿ ಪ್ರಸಾದವನ್ನು ನೀಡಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಬದಿಯಡ್ಕ ಪಂಚಾಯಿತಿ ಜನಪ್ರತಿನಿಧಿ ಶ್ಯಾಮ್ ಪ್ರಸಾದ್ ಮಾನ್ಯ, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಮಾನ ಮಾಸ್ತರ್ ಕಾರ್ಮಾರ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಸಮಿತಿ ಟ್ರಸ್ಟಿ ರಾಧಾಕೃಷ್ಣ ರೈ ಕಾರ್ಮಾರ್ ವಂದಿಸಿದರು.
ಕಾರ್ಮಾರು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸಭೆ
0
ನವೆಂಬರ್ 06, 2022