ಕಾರಡ್ಕ ಐಸಿಡಿಎಸ್ ಯೋಜನೆಯ ಅಧೀನದಲ್ಲಿ ದೇಲಂಪಾಡಿ, ಬೆಳ್ಳೂರು, ಕುಂಬ್ದಾಜೆ ಮತ್ತು ಕಾರಡ್ಕ ಪಂಚಾಯತ್‌ಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರ ಹುದ್ದೆಗಳ ಖಾಯಂ ನೇಮಕಾತಿಗಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ಆಯಾ ಪಂಚಾಯತ್‌ಗಳ ಖಾಯಂ ನಿವಾಸಿಗಳಾಗಿರಬೇಕು. ವಯಸ್ಸಿನ ಮಿತಿ 18-46. ವರ್ಕರ್ ಹುದ್ದೆಗೆ ಅರ್ಜಿ ಸಲ್ಲಿಸುವವರು SSLC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರಬಾರದು. ಓದಲು ಮತ್ತು ಬರೆಯಲು ತಿಳಿದಿರಬೇಕು. ಅರ್ಜಿ ನಮೂನೆಯನ್ನು ಕಾರಡ್ಕ ಐಸಿಡಿಎಸ್ ಕಛೇರಿ ಮತ್ತು ಪಂಚಾಯತ್ ಗಲಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 22. ದೂರವಾಣಿ 04994 261159.