ಪೆರ್ಲ : ಶೇಣಿ ಮಣಿಯಂಪಾರೆಯ ಶ್ರೀಅಯ್ಯಪ್ಪ ಭಜನಾ ಮಂದಿರದ ಗರ್ಭಗುಡಿ ಪುನರ್ ನಿರ್ಮಾಣ ಕಾರ್ಯದಂಗವಾಗಿ ಬಾಲಾಲಯ ಪ್ರತಿಷ್ಠಾ ಕಾರ್ಯ ಇತ್ತೀಚೆಗೆ ಜರಗಿತು.
ಮಂದಿರದ ಗುರುಸ್ವಾಮಿ ನಾರಾಯಣ ಮೂಲ್ಯ ಬಾರೆದಳ ಅವರ ಹಾಗೂ ಶಿಷ್ಯ ವೃಂದವರ ನೇತೃತ್ವದಲ್ಲಿ ನಡೆದ ಬಾಲಾಲಯ ಪ್ರತಿಷ್ಠಾ ಸಂದರ್ಭ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ವಿಶ್ವನಾಥ ನಾಯಕ್ ಕರೋಡಿ, ಕುಂಞಣ್ಣ ಮಾಸ್ತರ್ ನೆಕ್ಕರೆಪದವು, ಸುರೇಶ್ ಕೆದ್ರೋಳಿ, ಶ್ರೀಧರ ನಾಯಕ್ ಕುಕ್ಕಿಲ, ಮಂದಿರದ ಅಧ್ಯಕ್ಷ ರವೀಂದ್ರನಾಥ ನಾಯಕ್ ತೋಟದಮನೆ, ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಮೊದಲಾದವರು ಭಾಗವಹಿಸಿದ್ದರು. ಬಳಿಕ ಮಂದಿರದ ಗರ್ಭ ಗುಡಿಯನ್ನು ಸ್ವಯಂಸೇವಕರ ಕರಸೇವೆಯ ಶ್ರಮದಾನದ ಮೂಲಕ ತೆರವು ಕಾರ್ಯ ಜರಗಿತು.
ಶೇಣಿ ಮಣಿಯಂಪಾರೆ ಶ್ರೀಅಯ್ಯಪ್ಪ ಭಜನಾ ಮಂದಿರ ಬಾಲಾಲಯ ಪ್ರತಿಷ್ಠೆ
0
ನವೆಂಬರ್ 24, 2022
Tags