ತಿರುವನಂತಪುರ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಮಾನವ ಹಕ್ಕು ಆಯೋಗ ಎಚ್ಚರಿಕೆ ನೀಡಿದೆ. ಕಾರ್ಯದರ್ಶಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಇದೇ ರೀತಿ ಮುಂದುವರಿದರೆ ವರದಿಯೊಂದಿಗೆ ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಬೇಕಾಗುತ್ತದೆ ಎಂದು ಅಧ್ಯಕ್ಷ ನ್ಯಾಯಮೂರ್ತಿ ಆಂಟನಿ ಡೊಮಿನಿಕ್ ಹೇಳಿರುವರು.
ಕ್ಯಾನ್ಸರ್ ಔಷಧÀಗಳ ಹೆಸರಿನಲ್ಲಿ ನಡೆಯುತ್ತಿರುವ ಕಳ್ಳತನ, ವಂಚನೆ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಿಲ್ಲ ಎಂದು ಅಧ್ಯಕ್ಷರು ಟೀಕಿಸಿರುವರು.
ವರದಿ ಸಲ್ಲಿಕೆಯಾಗದ ಕಾರಣ ಆಯೋಗದ ಕಚೇರಿಯಿಂದ ಕಾರ್ಯದರ್ಶಿ ಕಚೇರಿಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸಿಲ್ಲ. ಆಯೋಗಕ್ಕೆ ಬರುವ ದೂರುಗಳು ವಿಳಂಬವಾಗಲಿದ್ದು, ದೂರುದಾರರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾದರೆ ಅಧಿಕಾರಿಗಳು ಉತ್ತರ ಹೇಳಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಕ್ಯಾನ್ಸರ್ ಔಷಧಿಗಳ ಹೆಸರಿನಲ್ಲಿ ವಂಚನೆ; ಆರೋಗ್ಯ ಇಲಾಖೆಯ ಕಾರ್ಯದರ್ಶಿಯ ಬೇಜವಾಬ್ದಾರಿ: ಎಚ್ಚರಿಕೆ ನೀಡಿದ ಮಾನವ ಹಕ್ಕುಗಳ ಆಯೋಗ
0
ನವೆಂಬರ್ 28, 2022