ಕುಂಬಳೆ: ಜಿಲ್ಲಾ ಕ್ಷಯರೋಗ(ಟಿಬಿ)ನಿಯಂತ್ರಣ ಕೇಂದ್ರ ಹಾಗೂ ಸಾಮಾಜಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕುಂಟಂಗೇರಡ್ಕ ಕಾಲೊನಿಯಲ್ಲಿ ಕ್ಷಯರೋಗ ತಪಾಸಣಾ ವೈದ್ಯಕೀಯ ಶಿಬಿರ ನಡೆಸಲಾಯಿತು. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು. ಕಾಲೊನಿಯ 42 ಮಂದಿ ನಿವಾಸಿಗಳನ್ನು ಶಿಬಿರದಲ್ಲಿ ಪರಿಶೀಲಿಸಲಾಯಿತು. 21 ಜನರ ಕಫದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗಿರಿಜನ ಪಂಚಾಯತ್ ಇಲಾಖೆಗಳ ಸಮನ್ವಯದೊಂದಿಗೆ ಕಾಲೊನಿಯನ್ನು ಮಾಲಿನ್ಯ ಮುಕ್ತಗೊಳಿಸಲು ಕ್ರಮಗಳನ್ನು ಕೈಗೊಳ್ಳಲು ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ಟಿಬಿ ಕೇಂದ್ರದ ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ವಿವೇಕಾನಂದ, ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಗಿರಿಜನ ವಿಸ್ತರಣಾಧಿಕಾರಿ ಜಲಜಾಕ್ಷ್ಮಿ, ಆರೋಗ್ಯ ನಿರೀಕ್ಷಕ ನಿಶಾಮೋಳ್, ಎಸ್ಟಿಎಸ್ ಎಸ್.ರತೀಶ್, ರಜನಿಕಾಂತ್, ಎಸ್.ದೀಪಕ್, ನಿತೀಶ್ ಲಾಲ್, ರತೀಶ್, ಕಿರಿಯ ಆರೋಗ್ಯ ನಿರೀಕ್ಷಕ ಕೆ.ಆದರ್ಶ್, ಜೆ.ಪಿ.ಎಚ್. ಎನ್ ಶಾರದ, ಆಶಾ ಕಾರ್ಯಕರ್ತೆಯರಾದ ಖದೀಜಾ, ಸರಳಾ, ಸುನೀತಾ ಮಾತನಾಡಿದರು.
ಕುಂಬಳೆಯಲ್ಲಿ ಕ್ಷಯರೋಗ ತಪಾಸಣಾ ಶಿಬಿರ
0
ನವೆಂಬರ್ 19, 2022