ಆಟೋ, ಸರಕು ಸಾಗಾಟ ವಾಹನಗಳಲ್ಲಿ ಶಬರಿಮಲೆ ಪ್ರವಾಸ ನಿಷೇಧ
0
ನವೆಂಬರ್ 28, 2022
ಕಾಸರಗೋಡು: ಶಬರಿಮಲೆಗೆ ಆಟೋರಿಕ್ಷಾ ಹಾಗೂ ಸರಕು ಸಾಗಾಟ ವಾಹನಗಳಲ್ಲಿ ಸಂಚಾರ ನಡೆಸದಂತೆ ರಾಜ್ಯ ಮೋಟಾರು ವಾಹನ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇಂತಹ ವಾಹನಗಳಲ್ಲಿ ಪ್ರವಾಸ ಕೈಗೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಲಾಗಿದೆ. ಆಟೋರಿಕ್ಷಾಗಳಿಗೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಯ 30ಕಿ,ಮೀ ವ್ಯಾಪ್ತಿ ವರೆಗೆ ಸಂಚರಿಸಲು ಮಾತ್ರ ಅನುಮತಿಯಿದ್ದು, ಕೆಲವರು ಕೆಲವು ಜಿಲ್ಲೆಗಳಿಂದ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಸರಕು ಸಾಗಾಟ ವಾಹನಗಳಲ್ಲೂ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದು, ಇದನ್ನು ತಡೆಗಟ್ಟಲಾಗುವುದು ಎಂದೂ ಮೋಟಾರು ವಾಃನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷಿತ ವಲಯ:
ಶಬರಿಮಲೆಯ 400ಕಿ.ಮೀ ವ್ಯಾಪ್ತಿಯನ್ನು ಸುರಕ್ಷಿತ ವಲಯ(ಸೇಫ್ ಝೋನ್)ಯೋಜನೆಯಲ್ಲಿ ಒಳಪಡಿಸಲಾಗಿದೆ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ಈ ಪ್ರದೇಶದಲ್ಲಿ 24ತಾಸುಗಳ ಕಾಲ ಮೋಟಾರು ವಾಹನ ಇಲಾಖೆಯ 20ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಲಿದೆ. ಬ್ರೇಕ್ ಡಔನ್ ಸರ್ವೀಸ್, ಅಪಘಾತ ರಕ್ಷಣಾ ಕಾರ್ಯಾಚರಣೆ, ಸಾರಿಕೆ ಬಿಕ್ಕಟ್ಟು ನಿವಾರಣೆ, ಅಪಘಾತ ಸಂಭವಿಸಿದಲ್ಲಿ ತ್ವರಿತ ಕಾರ್ಯಾಚರಣೆ ನಡೆಸಲು ಕ್ಲಿನಿಕಲ್ ರೆಸ್ಪಾಂಡ್ ಟೀಮ್, ಆಂಬುಲೆನ್ಸ್, ಕ್ರೇನ್‍ಗಳ ಉಚಿತ ಸೇವೆ ಸೇಫ್ ಝೋನ್ ವಲಯದಲ್ಲಿ ಲಭ್ಯವಾಗಲಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.