ಬದಿಯಡ್ಕ: ಕಾಸರಗೋಡಿನ ಪ್ರಾಚೀನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮೂಲನಿವಾಸಿ ಮಾಯಿಲರಸ ಕಟ್ಟಿದ ಕೋಟೆಗಳು ಅವನತಿ ಅಂಚಿನಲ್ಲಿದ್ದು ಅದನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿ ರಾಜ್ಯ ಬಂದರು, ಪುರಾತತ್ವ ಇಲಾಖೆ ಸಚಿವ ಅಹಮ್ಮದ್ ದೇವರಕೋವಿಲ್ ಅವರಿಗೆ ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಮನವಿ ನೀಡಲಾಯಿತು.
ಕೇರಳ ತುಳು ಅಕಾಡಮಿ ಕಚೇರಿಯಲ್ಲಿ ಸಚಿವರನ್ನು ಸಂದರ್ಶಿಸಿದ ನಿಯೋಗದಲ್ಲಿ ಅಕಾಡಮಿಯ ಮಾಜಿ ಸದಸ್ಯ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಸಂಚಾಲಕ ಸುಂದರ ಬಾರಡ್ಕ, ಸಲಹೆಗಾರ ಕೃಷ್ಣ ಡಿ ದರ್ಬೆತ್ತಡ್ಕ ಉಪಸ್ಥಿತರಿದ್ದರು. ಮನವಿಯನ್ನು ಪರಿಶೀಲಿಸಿದ ಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮನವಿಯ ಪ್ರತಿಗಳನ್ನು ಶಾಸಕ ಎಕೆಎಂ ಅಶ್ರಫ್, ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ ಆರ್ ಜಯಾನಂದ ಅವರಿಗೆ ನೀಡಲಾಯಿತು.
ಮಾಯಿಲ ಕೋಟೆ ಸಂರಕ್ಷಿಸಲು ಸಚಿವರಿಗೆ ಮನವಿ
0
ನವೆಂಬರ್ 03, 2022
Tags