ಕಾಸರಗೋಡು: ಕತಾರ್‍ನಲ್ಲಿ ನಡೆಯಲಿರುವ ಫುಟ್ ಬಾಲ್ ವಿಶ್ವಕಪ್‍ಚಂಪ್ಯನ್‍ಶಿಪ್ ಅಂಗವಾಗಿ ಸರ್ಕಾರಿ ಕ್ರೀಡಾ ಯುವಜನ ಕಛೇರಿ ಹಾಗೂ ಸ್ಪೋಟ್ರ್ಸ್ ಕೌನ್ಸಿಲ್ ವತಿಯಿಂದ ಆಯೋಜಿಸಲಾದ "ಒನ್ ಮಿಲಿಯನ್ ಗೋಲ್" ಶಿಬಿರದ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಯಿತು.
ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಸಮೀಪದ ಟರ್ಫ್ ಕೋರ್ಟ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಎಂ.ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂತೋಷ್ ಟ್ರೋಫಿ ಆಟಗಾರ್ತಿ ಬಿಜುಕುಮಾರಿ ಮತ್ತು ಅನಕ್, ಜಿಲ್ಲಾ ಕ್ರೀಡಾ ಪರಿಷತ್ತಿನ ಕಾರ್ಯಕಾರಿ ಸದಸ್ಯ ಅನಿಲ್ ಬಂಗಳಂ, ಪಾಲಂ ನಾರಾಯಣನ್ ಹಾಗೂ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಕೆ.ವೀರಮಣಿ ಉಪಸ್ಥಿತರಿದ್ದರು. ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಎಂ.ಎಸ್.ಸುಧೀರ್ ಬೋಸ್ ಸ್ವಾಗತಿಸಿ, ಉಪಾಧ್ಯಕ್ಷರುಪಿ.ಪಿ.ಅಶೋಕ್ ವಂದಿಸಿದರು.
ರಾಜ್ಯದ 10 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಿಂಗ ಭೇದವಿಲ್ಲದೆ ಮೂಲಭೂತ ಫುಟ್ಬಾಲ್ ಜ್ಞಾನವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ನವೆಂಬರ್ 11 ರಿಂದ 21 ರವರೆಗೆ 10 ದಿನಗಳ ಕಾಲ ವಿವಿಧ ಜಿಲ್ಲೆಗಳ 1000 ಕೇಂದ್ರಗಳಲ್ಲಿ ಒಂದು ಲಕ್ಷ ಮಕ್ಕಳಿಗೆ ಪ್ರತಿದಿನ 1 ಗಂಟೆ ತರಬೇತಿ ನೀಡಲಾಗುವುದು. ಜಿಲ್ಲೆಯಲ್ಲಿ 72 ಕೇಂದ್ರಗಳಿದ್ದು, ತರಬೇತಿ ನೀಡುವ ಮೂಲಕಫುಟ್ಬಾಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮಕ್ಕಳಿಗೆ ಅವಕಾಶ ನೀಡಲಾಗುವುದು. ಇದರ ಅಂಗವಾಗಿ 'ಸೇ ನೋ ಟು ಡ್ರಗ್ಸ್' ಎಂಬ ಮಾದಕ ವಸ್ತು ವಿರೋಧಿ ಅಭಿಯಾನವೂ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
"ಒನ್ ಮಿಲಿಯನ್ ಗೋಲ್" ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ
0
ನವೆಂಬರ್ 12, 2022
Tags