ಕುಂಬಳೆ: ಮಂಜೇಶ್ವರ, ಕುಂಬಳೆ, ಕಾಸರಗೋಡು ಮತ್ಸ್ಯ ಗ್ರಾಮಗಳಲ್ಲಿ ಸಾಗರಮಿತ್ರ ಯೋಜನೆಗೆ ಗುತ್ತಿಗೆ ಆಧಾರದ ಮೇಲೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಾಗರಮಿತ್ರ ಎಂಬುದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂ.ಎಂ.ಎಸ್.ವೈ)ಅಡಿಯಲ್ಲಿ ಮೀನುಗಾರಿಕೆ ಇಲಾಖೆಯು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಿರುವ ಯೋಜನೆಯಾಗಿದೆ.
ತಿಂಗಳಿಗೆ 15,000 ಪ್ರೋತ್ಸಾಹಧನ ಈ ಹುದ್ದೆಗೆ ಲಭಿಸಲಿದೆ. ಕನಿಷ್ಠ ಮೀನುಗಾರಿಕೆ ವಿಜ್ಞಾನ/ಸಾಗರ ಜೀವಶಾಸ್ತ್ರ/ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದವರು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡಲು ಸಾಧ್ಯವಾಗುವವರು, ಕಂಪ್ಯೂಟರ್ ಸಾಕ್ಷರತೆ ಮತ್ತು ಮೀನು ಗ್ರಾಮ ಇರುವ ಪ್ರದೇಶದಲ್ಲಿ ಅಥವಾ ಸಮೀಪದಲ್ಲಿ ವಾಸಿಸುವವರು ಅರ್ಹರಾಗಿರುತ್ತಾರೆ. ವಯೋಮಿತಿ ಗರಿಷ್ಠ 35 ವರ್ಷ. ಅಭ್ಯರ್ಥಿಗಳು ನವೆಂಬರ್ 23 ರಂದು ಮಧ್ಯಾಹ್ನ 2.30 ಕ್ಕೆ ಕಾಞಂಗಾಡ್ ಮೀನುಗಾರಿಕಾ ಉಪನಿರ್ದೇಶಕರ ಕಛೇರಿಯಲ್ಲಿ ಅರ್ಜಿ, ಅರ್ಹತಾ ಪ್ರಮಾಣಪತ್ರ (ಫೆÇೀಟೋಕಾಪಿ ಸೇರಿದಂತೆ) ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನÀ ಮಾಹಿತಿಗೆ ದೂರವಾಣಿ 04672202537 ಸಂಪರ್ಕಿಸಬಹುದು.
ಸಾಗರಮಿತ್ರ ಯೋಜನೆ ಹುದ್ದೆಗೆ ಅರ್ಜಿ ಆಹ್ವಾನ
0
ನವೆಂಬರ್ 17, 2022
Tags