ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿದ್ದ ವಿಚಿತ್ರ ಪ್ರಕರಣದ ಅಸಲಿ ಸತ್ಯ ಇದೀಗ ಬಯಲಾಗಿದೆ. ವಾಟ್ಸ್ಆಯಪ್ನಲ್ಲಿ ಬಂದ ಮೆಸೇಜ್ನಂತೆಯೇ ಮನೆಯಲ್ಲಿ ಘಟನೆಗಳು ನಡೆಯುತ್ತಿದ್ದವು. ಇದರಿಂದ ಇಡೀ ಕುಟುಂಬ ಗಾಬರಿಗೊಂಡು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿತ್ತು.
ಇದೀಗ ಆ ವಿಚಿತ್ರ ಘಟನೆಯ ಹಿಂದೆ ಯುವಕನೊಬ್ಬನ ಕೈವಾಡ ಇರುವುದು ಬಹಿರಂಗವಾಗಿದೆ.
ಅಂದಹಾಗೆ ಈ ಘಟನೆ ಕೊಲ್ಲಂ ಜಿಲ್ಲೆ ಕೊಟ್ಟರಾಕ್ಕರ ಪಟ್ಟಣದ ಸಮೀಪ ಇರುವ ನೆಲ್ಲಿಕುನ್ನಮ್ನಲ್ಲಿ ನಡೆದಿತ್ತು. ವಾಟ್ಸ್ಆಯಪ್ನಲ್ಲಿ ಬಂದ ಮಸೇಜ್ನಂತೆಯೇ ಮನೆಯಲ್ಲಿ ಅನೇಕ ಘಟನೆಗಳು ನಡೆಯುತ್ತಿತ್ತು. ನೆಲ್ಲಿಕುನ್ನಮ್ ಗ್ರಾಮದ ನಿವಾಸಿ ಹಾಗೂ ಎಲೆಕ್ಟ್ರಿಷಿಯನ್ ರಾಜನ್ ಅವರ ಮನೆ ಈ ವಿಚಿತ್ರ ವಿದ್ಯಾಮಾನಕ್ಕೆ ಸಾಕ್ಷಿಯಾಗಿತ್ತು.
ಕಳೆದ ಏಳು ತಿಂಗಳಿಂದಲೂ ರಾಜನ್ ಮಗಳು ಸಾಜಿತಾ, ತನ್ನ ತಾಯಿ ವಿಲಾಸಿನಿ ಮೊಬೈಲ್ನಲ್ಲಿ ಆಕೆಯ ಗಮನಕ್ಕೆ ಬಾರದಂತೆ ಮಸೇಜ್ಗಳನ್ನು ಸ್ವೀಕರಿಸುತ್ತಿದ್ದಳು. ಅಚ್ಚರಿ ಏನೆಂದರೆ, ಮಸೇಜ್ ಬಂದ ಕೂಡಲೇ ವಿದ್ಯುತ್ ಸಾಧನಗಳು ಹಾಗೂ ಸ್ವಿಚ್ ಬೋರ್ಡ್ಗಳು ಇದ್ದಕ್ಕಿದ್ದಂತೆ ಸುಡಲು ಆರಂಭಿಸುತ್ತಿತ್ತು. ರಾಜನ್ ಎಲೆಕ್ಟ್ರಿಷಿಯನ್ ಆಗಿದ್ದರೂ ಸಹ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ.
ಫ್ಯಾನ್ ಸ್ವಿಚ್ ಆಫ್ ಆಗುತ್ತದೆ ಎಂದು ಮಸೇಜ್ ಬಂದ ಕೂಡಲೇ ಫ್ಯಾನ್ ಆಫ್ ಆಗುತ್ತಿತ್ತು. ಆನ್ ಆಗುತ್ತದೆ ಎಂದು ಆನ್ ಆಗುತ್ತಿತ್ತು. ಟವಿ ಕೂಡ ಆನ್ ಆಯಂಡ್ ಆಫ್ ಆಗುತ್ತಿತ್ತು. ಟ್ಯಾಂಕರ್ನಿಂದ ನೀರು ಹೊರ ಸುರಿಯುತ್ತದೆ ಎಂದು ಕೂಡಲೇ ಅದೇ ರೀತಿ ಘಟನೆ ನಡೆಯುತ್ತಿತ್ತು. ಈ ಸಂಬಂಧ ಸೈಬರ್ ಸೆಲ್ಗೆ ಕುಟುಂಬದ ದೂರು ನೀಡಿತ್ತು.
ತನಿಖೆ ನಡೆಸಿದ ಪೊಲೀಸರಿಗೆ ಯುವಕನೊಬ್ಬನ ಕೈವಾಡ ಇರುವುದು ಬಯಲಾಗಿದೆ. ಆಯಪ್ ಒಂದರ ಮೂಲಕ ಸಂತ್ರಸ್ತ ಕುಟುಂಬದ ಮೊಬೈಲ್ ಸಂಪರ್ಕಿಸಿ, ಈ ಕೃತ್ಯ ಎಸಗುತ್ತಿದ್ದ. ಆರೋಪಿ ಯುವಕನ ಮೊಬೈಲ್ ಫೋನ್ನಲ್ಲಿ ವಿಶೇಷ ಆಯಪ್ ಒಂದು ಇನ್ಸ್ಟಾಲ್ ಆಗಿದ್ದು, ಅದರ ಮೂಲಕವೇ ಸಂತ್ರಸ್ತ ಕುಟುಂಬದ ವಿದ್ಯುತ್ ಸಾಧನಗಳನ್ನು ಹ್ಯಾಕ್ ಮಾಡಿ ನಿಯಂತ್ರಣ ಮಾಡುತ್ತಿದ್ದ.
ಇದನ್ನು ತಮಾಷೆಗಾಗಿ ಆತ ಮಾಡಿದನಂತೆ. ಆದರೆ, ಇಷ್ಟೊಂದು ಗಂಭೀರವಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದು ಆರೋಪಿ ಯುವಕ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಟಿವಿ ಸೇರಿದಂತೆ ಇತರೆ ಗೃಹ ಬಳಕೆಯ ವಿದ್ಯುತ್ ಸಾಧನಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಕೊಟ್ಟಾರಕ್ಕರ ಎಸ್ಐ ಪ್ರಶಾಂತ್ ತಿಳಿಸಿದ್ದಾರೆ.