ಕಾಸರಗೋಡು: ಬದಿಯಡ್ಕದ ದಂತ ವೈದ್ಯ ಕೃಷ್ಣಮೂರ್ತಿ ಅವರ ನಿಗೂಢ ಸಾವು ಆತ್ಮಹತ್ಯೆಯಲ್ಲ, ಬದಲು ಕೊಲೆ ನಡೆಸಲಾಗಿದೆ ಎಂದು ಬಿಜೆಪಿ ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ದಶಕಗಳಿಂದ ಬದಿಯಡ್ಕದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ. ಕೃಷ್ಣಮೂರ್ತಿ ಅವರ ಮೇಲೆ ಯಾವುದೇ ಆರೋಪಗಳು ಇದುವರೆಗೆ ಕೇಳಿ ಬಂದಿಲ್ಲ. ಪರಂಪರಾಗತ ವೈದ್ಯ ಕುಟುಂಬದ ಸದಸ್ಯರಾಗಿರುವ ಡಾ. ಕೃಷ್ಣಮೂರ್ತಿ ವಿರುದ್ಧ ಪಿತೂರಿ ನಡೆಸಲಾಗಿದೆ. ಅ. 26ರಂದು ಕ್ಲಿನಿಕ್‍ಗೆ ಆಗಮಿಸಿದ ಮಹಿಳೆಯನ್ನು ಅವಮಾನಿಸಿರುವುದಾಗಿ ಹೇಳಲಾಗಿದೆ. ನ. 5ರಂದು ಇದೇ ವೈದ್ಯರ ಬಳಿ ಮತ್ತೆ ಚಿಕಿತ್ಸೆಗೆ ಆಗಮಿಸಿದ್ದು, ಮಹಿಳೆಯನ್ನು ಅವಮಾನಿಸಿರುವ ಬಗ್ಗೆ ನ. 9ರಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದರ ಹಿಂದಿನ ದಿನ ಕ್ಲಿನಿಕ್‍ಗೆ ಆಗಮಿಸಿದ ಗೂಂಡಾ ತಂಡ, ಮಹಿಳೆಗೆ ಅವಮಾನವೆಸಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಿದೆ. ಇದಾದ ನಂತರ ವೈದ್ಯರು ನಾಪತ್ತೆಯಾಗಿದ್ದು, 190ಕಿ.ಮೀ ದೂರದ ಕುಂದಾಪುರದಲ್ಲಿ ರೈಲ್ವೆ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿರುವುದು ನಿಗೂಢತೆಗೆ ಕಾರಣವಾಗಿದೆ. ವೈದ್ಯರನ್ನು ಊರುಬಿಟ್ಟು ತೆರಳುವಂತೆ ಮಾಡಲು ಸುಳ್ಳು ಆರೋಪ ಇವರ ಮೇಲೆ ಹೊರಿಸಲಾಗಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ವೈದ್ಯರ ಪತ್ನಿ ಪ್ರೀತಿ ಕೃಷ್ಣಮೂರ್ತಿ ಅವರಲ್ಲಿ ತಂಡವೊಂದು ಹಣಕ್ಕಾಗಿ ಬೇಡಿಕೆಯಿರಿಸಿರುವ ಬಗ್ಗೆ ನೀಡಿದ ದೂರಿನ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ನಡೆಸದೆ, ದೂರು ನೀಡಿದವರ ಬಗ್ಗೆ ಅಪಹಾಸ್ಯ ನಡೆಸಿರುವುದಾಗಿಯೂ ದೂರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್‍ಕುಮಾರ್ ರೈ ಉಪಸ್ಥಿತರಿದ್ದರು.
ಡಾ.ಕೃಷ್ಣಮೂರ್ತಿಯವರದ್ದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ: ಬಿಜೆಪಿ
0
ನವೆಂಬರ್ 12, 2022