HEALTH TIPS

ವಿಶ್ವವಿದ್ಯಾನಿಲಯಗಳನ್ನು ನಡೆಸುವ ಜವಾಬ್ದಾರಿ ರಾಜ್ಯಪಾಲರ ಹೊಣೆ: ಯಾರೂ ಅಕ್ರಮವಾಗಿ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ರಾಜಕೀಯ ಹಸ್ತಕ್ಷೇಪ ಪ್ರಬಲವಾಗಿದೆ


                  ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ತೀವ್ರಗೊಂಡಿದೆ.  ಕುಲಪತಿಯಾಗಿ ಸಂಪೂರ್ಣ ವಿಚಲಿತನಾಗಿದ್ದೇನೆ ಎಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.
                 ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ವಜಾಗೊಳಿಸಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
               ಅವರು ಕೇರಳದಿಂದ ದೆಹಲಿಗೆ ಹೋಗುವವರೆಗೂ ಯಾವುದೇ ಸರ್ಕಾರಿ ಸುಗ್ರೀವಾಜ್ಞೆಯನ್ನು ಸ್ವೀಕರಿಸಲಿಲ್ಲ. ಇದನ್ನು ಎಷ್ಟು ಸಲ ಹೇಳಬೇಕೋ ಗೊತ್ತಿಲ್ಲ. ತನಗೆ ಲಭ್ಯವಾಗದ ಆಜ್ಞೆಗಳ ಬಗ್ಗೆ ಮಾತನಾಡುವಂತಿಲ್ಲ. ಸರ್ಕಾರದೊಂದಿಗೆ ವೈಯಕ್ತಿಕ ಯುದ್ಧವಲ್ಲ. ತನಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ ಎಂದಿರುವರು.
           ಕುಲಪತಿಯಾಗಿ ತಾನು ಸಂಪೂರ್ಣ ದಿಗ್ಭ್ರಮೆಗೊಂಡಿದ್ದೇನೆ.  ಪ್ರಬಲ ರಾಜಕೀಯ ಹಸ್ತಕ್ಷೇಪಗಳು ನಡೆದಿವೆ. ಕಾನೂನು ಬಾಹಿರವಾಗಿ ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ವಿಶ್ವವಿದ್ಯಾನಿಲಯಗಳನ್ನು ನಡೆಸುವ ಜವಾಬ್ದಾರಿ ರಾಜ್ಯಪಾಲರ ಮೇಲಿದೆ. ನ್ಯಾಯಾಲಯದ ಆದೇಶಗಳನ್ನು ಗೌರವಿಸುವುದು ಮತ್ತು ಪಾಲಿಸುವುದು ನಮ್ಮ ಕರ್ತವ್ಯ ಎಂದಿರುವರು.
          ವಿಶ್ವವಿದ್ಯಾನಿಲಯಗಳ ಕಾರ್ಯನಿರ್ವಹಣೆಯಲ್ಲಿ ಯಾರಾದರೂ ಮಧ್ಯಪ್ರವೇಶಿಸಿದರೆ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ. ಆಡಳಿತ ಮುನ್ನಡೆಸುವ ಹೊಣೆ ಚುನಾಯಿತ ಸರ್ಕಾರ ಹೊಂದಿದೆ. ನಾನು ನನ್ನ ಅಧಿಕಾರ ವ್ಯಾಪ್ತಿಯಲ್ಲಿ ಮತ್ತು ನೀವು ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾದುದು ಕ್ರಮವೆಂದು ರಾಜ್ಯಪಾಲರು ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries