ಕಾಸರಗೋಡು: ಕರ್ನಾಟಕ ಇತಿಹಾಸದ ಅಧ್ಯಯನ, ಕನ್ನಡ ಸಂಸ್ಕøತಿ, ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿರುವ ಕರ್ನಾಟಕ ಇತಿಹಾಸ ಅಕಾಡಮಿ ಬೆಂಗಳೂರು ಇದರ ಕೇರಳ ಘಟಕದ ಉದ್ಘಾಟನಾ ಸಮಾರಂಭ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಜರುಗಿತು.
ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ನ್ಯಾಯವಾದಿ ಕೆ. ಶ್ರೀಕಾಂತ್ ಕಾರ್ಯಾಲಯ ಹಾಗೂ ಕರ್ನಾಟಕ ಇತಿಹಾಸ ಅಕಾಡಮಿಯ ಕೇರಳ ಗಡಿನಾಡ ಘಟಕವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಘಟಕದ ನೂತನ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ ನಡೆಯಿತು. ಘಟಕದ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಹಾಗೂ ಪ್ರಧಾನ ಕಾರ್ಯದರ್ಶಿ ವಾಮನ ರಾವ್ ಬೇಕಲ್ ಅವರನ್ನು ಶಾಸಕ ಎನ್.ಎ ನೆಲ್ಲಿಕುನ್ನು ಮೈಸೂರು ಪೇಟ ತೊಡಿಸಿ ಅಬಿನಂದಿಸಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಇತಿಹಾಸ ಅಕಾಡಮಿ ದ.ಕ ಜಿಲ್ಲಾ ಘಟಕ ಅಧ್ಯಕ್ಷ, ವಕೀಲ ಮಹಮ್ಮದ್ ಅಸ್ಗರ್, ಕಾಸರಗೋಡು ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಎ.ಶ್ರೀನಾಥ್, ಪತ್ರಕರ್ತರಾದ ರವಿ ನಾಯ್ಕಪು, ಪ್ರದೀಪ್ ಬೇಕಲ್, ಗಂಗಾಧರ ತೆಕ್ಕೆಮೂಲೆ, ಅಖಿಲೇಶ್ ನಗುಮುಗಂ, ಅಚ್ಯುತ ಚೇವಾರ್, ಟಿ. ಶಂಕರನಾರಾಯಣ ಭಟ್, ವಕೀಲ ಥಾಮಸ್ ಡಿ.ಸೋಜ, ಅರಿಬೈಲ್ ಗೋಪಾಲ ಶೆಟ್ಟಿ, ಸಾಹಿತಿ ಎಂ.ಕೆ ಉದಿನೂರ್ ಮುಂತದವರು ಉಪಸ್ಥಿತರಿದ್ದರು. ಜಗದೀಶ್ ಕೂಡ್ಲು ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಂದಿಸಿದರು. ಕಾರ್ಯಕ್ರಮದ ಅಮಗವಾಗಿ ವಿವಿಧ ಮಹಿಳಾ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಕರ್ನಾಟಕ ಇತಿಹಾಸ ಅಕಾಡಮಿ: ಕಾಸರಗೋಡಿನಲ್ಲಿ ಕೇರಳ ಘಟಕ, ನೂತನ ಕಾರ್ಯಾಲಯ ಉದ್ಘಾಟನೆ
0
ನವೆಂಬರ್ 14, 2022