ಕೊಚ್ಚಿ: ನಿಷೇಧಿತ ಸಂಘಟನೆ ಕ್ಯಾಂಪಸ್ ಫ್ರಂಟ್ ಜಿಲ್ಲಾ ಕಾರ್ಯದರ್ಶಿ ದಂಗೆಗೆ ಕರೆ ನೀಡಿರುವುದು ಬೆಳಕಿಗೆ ಬಂದಿದೆ. ಅಯೋಧ್ಯೆಯಲ್ಲಿ ಕೆಡವಲಾದ ಮಸೀದಿ ವಾಪಸ್ ನಿರ್ಮಿಸುವವರೆಗೂ ಮರೆಯಬಾರದು ಎಂದು ಫೇಸ್ ಬುಕ್ ನಲ್ಲಿ ಕರೆ ನೀಡಿದ್ದಾನೆ.
ಚುಂಗಪ್ಪರ ಮೂಲದ ಮುನೀರ್ ಇಬ್ನು ನಜೀರ್ ತಮ್ಮ ಫೇಸ್ ಬುಕ್ ಪೇಜ್ ಮೂಲಕ ದಂಗೆಯ ಕರೆ ನೀಡಿದ್ದಾನೆ.
ಮುನೀರ್ ಡಿಸೆಂಬರ್ 6, 2020 ರಂದು ಶಾಲಾ ಮಕ್ಕಳ ಸಮವಸ್ತ್ರದ ಮೇಲೆ ಐ ಆಮ್ ಬಾಬ್ರಿ ಸ್ಟಿಕ್ಕರ್‍ಗಳನ್ನು ಹಾಕಿದ್ದಕ್ಕಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ವ್ಯಕ್ತಿ. ಆತನ ನೇತೃತ್ವದಲ್ಲಿ ನಿμÉೀಧಿತ ಸಂಘಟನೆಯ ರಹಸ್ಯ ಸಭೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಇತ್ತೀಚೆಗೆ ರಾಜ್ಯ ಪೋಲೀಸ್ ಮುಖ್ಯಸ್ಥ ಮತ್ತು ಎನ್.ಐ.ಎ ಗೆ ದೂರು ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆದೇಶ ನೀಡಿದ ನ್ಯಾಯಾಲಯದ ತೀರ್ಪಿನ ದಿನವಾದ ನವೆಂಬರ್ 9 ರಂದು ಆತ ತನ್ನ ಫೇಸ್‍ಬುಕ್ ಪುಟದ ಮೂಲಕ ಗಲಭೆ ಕರೆ ನೀಡಿದ್ದಾನೆ.
ಕೆಡವಲ್ಪಟ್ಟ ಮಸೀದಿ ಮರಳಿ ನಿರ್ಮಿಸುವ ತನಕ ಅದನ್ನು ಮರೆಯಬೇಡ: ಮತ್ತೆ ಗಲಭೆಗೆ ಕರೆನೀಡಿದ ನಿಷೇಧಿತ ಸಂಘಟನೆಯ ನಾಯಕ
0
ನವೆಂಬರ್ 14, 2022