ಬದಿಯಡ್ಕ: ಬದಿಯಡ್ಕದಲ್ಲಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ದಂತವೈದ್ಯರೋರ್ವರು ಮಂಗಳವಾರದಿಂದ ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿದೆ.
ಬದಿಯಡ್ಕ ಹೃದಯ ಭಾಗದಲ್ಲಿ ದಂತವೈದ್ಯರಾಗಿರುವ ಡಾ.ಕೃಷ್ಣಮೂರ್ತಿ ಎಸ್. ಮಂಗಳವಾರ ಮಧ್ಯಾಹ್ನದ ಬಳಿಕ ನಾಪತ್ತೆಯಾಗಿರುವುದಾಗಿ ಅವರ ಕುಟುಂಬದ ಸದಸ್ಯರು ಬದಿಯಡ್ಕ ಠಾಣೆಗೆ ದೂರು ನೀಡಿದ್ದಾರೆ. ಅವರ ದ್ವಿಚಕ್ರ ವಾಹನ ಕುಂಬಳೆಯಲ್ಲಿ ಪತ್ತೆಯಾಗಿದೆ. ಪೋಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದವರು 8296818248, 04998-284033 ಎಂಬ ಸಂಖ್ಯೆಗಳಿಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.
ಬದಿಯಡ್ಕದ ದಂತವೈದ್ಯ ನಾಪತ್ತೆ
0
ನವೆಂಬರ್ 09, 2022