ತಿರುವನಂತಪುರ: ಮೇಯರ್ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ತಿರುವನಂತಪುರಂ ಕಾರ್ಪೋರೇಷನ್ ನಲ್ಲಿ ಈಗ ಮತ್ತೊಂದು ವಿವಾದವೆದ್ದಿದ್ದು ಒಂದೂವರೆ ವರ್ಷದಲ್ಲಿ ಮೂರು ಪ್ರಮುಖ ಕಡತಗಳು ನಾಪತ್ತೆಯಾಗಿರುವ ಬಗ್ಗೆ ತನಿಖೆ ಆರಂಭವಾಗಿದೆ.
ಕಟ್ಟಡ ಸಂಖ್ಯೆ ವಿಭಾಗದಲ್ಲಿ 2 ಕಡತಗಳು ಹಾಗೂ ಮರ ಕಡಿಯುವ ಸಂಬಂಧ ಆರೋಗ್ಯ ಇಲಾಖೆ ವ್ಯಾಪ್ತಿಯ ಕಡತ ನಾಪತ್ತೆಯಾಗಿದೆ. ಕಟ್ಟಡ ಸಂಖ್ಯೆ ಅಕ್ರಮಕ್ಕೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ದೊಡ್ಡ ಭ್ರμÁ್ಟಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ನಗರಪಾಲಿಕೆ ವಿರುದ್ದ ಮ್ಯೂಸಿಯಂ ಪೋಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಸಿಬ್ಬಂದಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪ್ರಕರಣವನ್ನು ಗೌಪ್ಯವಾಗಿ ನಿಭಾಯಿಸಲಾಗುತ್ತಿದೆ. ಪಾಲಿಕೆಯಲ್ಲಿ ವರ್ಷಕ್ಕೆ ಕನಿಷ್ಠ 20 ಕಡತಗಳು ನಾಪತ್ತೆಯಾಗುತ್ತಿವೆ ಅಥವಾ ಅವ್ಯವಹಾರ ಆಗುತ್ತಿವೆ ಎಂದು ವರದಿಯಾಗಿದೆ. ಆದರೆ ಪೋಲೀಸರಿಗೆ ತಿಳಿಯದಂತೆ ಆಂತರಿಕ ತನಿಖೆ ನಡೆಸುವುದು ವಾಡಿಕೆ.
ವಿಜಿಲೆನ್ಸ್ ತನಿಖೆ ಬರುತ್ತಿದ್ದಂತೆಯೇ ಕಡತಗಳು ನಾಪತ್ತೆಯಾಗಿವೆ. ಗುತ್ತಿಗೆದಾರರ ಬಿಲ್ ಪಾಸ್ ಮಾಡುವ ಹಂತದಲ್ಲೂ ಕಡತಗಳು ಕಾಣೆಯಾಗಿವೆ. 11 ವಲಯ ಕಚೇರಿಗಳು ಮತ್ತು 25 ವೃತ್ತ ಕಚೇರಿಗಳ ಕಡತಗಳನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ. ಇಲ್ಲಿ ತಲುಪಿಸಬೇಕಾದ ಕಡತಗಳನ್ನು ಸಾಮಾನ್ಯವಾಗಿ ವಲಯ ವೃತ್ತ ಕಚೇರಿಗಳಿಗೆ ವರ್ಗಾಯಿಸಲಾಗುತ್ತದೆ. ಕೆಲವು ತಿಂಗಳ ನಂತರ ಹಿಂತಿರುಗುತ್ತವೆ. ಕಡತಗಳ ಬಗ್ಗೆ ವ್ಯಾಪಕ ದೂರುಗಳಿವೆ. 3000 ಚದರ ಅಡಿವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಡತಗಳನ್ನು ಆನ್‍ಲೈನ್‍ನಲ್ಲಿ ಮಾಡಲಾಗಿದೆ.
ತಿರುವನಂತಪುರ ಕಾರ್ಪೋರೇಷನ್ ನಲ್ಲಿ ಮತ್ತೊಂದು ವಿವಾದ: ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮೂರು ಕಡತಗಳು ನಾಪತ್ತೆ: ತನಿಖೆ ಪ್ರಾರಂಭ
0
ನವೆಂಬರ್ 14, 2022