HEALTH TIPS

ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡ ಮೋದಿ ಮತ್ತು ಗೆಹ್ಲೋಟ್; ರಾಜಸ್ಥಾನ ಸಿಎಂರನ್ನು ಹೊಗಳಿದ ಪ್ರಧಾನಿ!

 

                 ರಾಜಸ್ಥಾನ: ರಾಜಸ್ಥಾನದ ರಾಜಕಾರಣದಲ್ಲಿ ಮಂಗಳವಾರ (ನ.1) ಒಂದು ಅಪರೂಪದ ಘಟನೆ ನಡೆದಿದೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ಮತ್ತು ಪ್ರಧಾನಿ ಮೋದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಶ್ಚರ್ಯದ ವಿಷಯ ಏನೆಂದರೆ ಪ್ರಧಾನಿ, ಗೆಹ್ಲೋಟ್​ರನ್ನು ಹೊಗಳಿದ್ದಾರೆ!

          ಮಾನ್​ಘರ್​ ಧಾಮ್​ ಎನ್ನುವಲ್ಲಿ ನವೆಂಬರ್ 17, 1913ರಲ್ಲಿ ಜಲಿಯನ್​ವಾಲ ಬಾಗ್​ನಂತೆಯೆ ಬ್ರಿಟಿಷರಿಂದ ನರಸಂಹಾರ ನಡೆದಿತ್ತು. ಅಂದು ಭಿಲ್​ ಸಮುದಾಯದ 1500 ಜನರನ್ನು ಕೊಲ್ಲಲಾಗಿತ್ತು. ಈ ಘಟನೆಯ ನೆನಪಿಗೆ ಮಾನ್​ಘರ್​ ಧಾಮ್‌ಅನ್ನು ಮೋದಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದರು.

              ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಮತ್ತು ಪ್ರಧಾನಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗೆಹ್ಲೋಟ್​ರ ಕುರಿತು 'ನಾನು ಮತ್ತು ಅಶೋಕ್​ ಜಿ ಮುಖ್ಯಮಂತ್ರಿಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇವರು ನುರಿತ ರಾಜಕಾರಣಿ ಆಗಿದ್ದು ಇಡೀ ವೇದಿಕೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿ' ಎಂದು ಹೇಳಿದ್ದಾರೆ.

             ಹಿಂದೆ ಗೆಹ್ಲೋಟ್​ 'ನಮ್ಮ ಪ್ರಧಾನಿ ವಿದೇಶಕ್ಕೆ ಹೋದಾಗ ಅವರಿಗೆ ಉತ್ತಮ ಸ್ಥಾನಮಾನ ಸಿಗುತ್ತಿದೆ. ಏಕೆಂದರೆ ಅವರು ಪ್ರಜಾಪ್ರಭುತ್ವ ಆಳವಾಗಿ ಬೇರೂರಿರುವ, ಗಾಂಧಿ ಹುಟ್ಟಿದ ದೇಶದ ಪ್ರಧಾನಿಯಾಗಿದ್ದಾರೆ. ಜಗತ್ತು, ಆ ದೇಶದ ಪ್ರಧಾನಿ ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಹೆಮ್ಮೆಪಡುತ್ತೆ' ಎಂದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries