ಕಾಸರಗೋಡು: ಬೇಕಲ್ ಇಂಟನ್ರ್ಯಾಷನಲ್ ಬೀಚ್ ಫೆಸ್ಟ್ ಸಂಘಟನಾ ಸಮಿತಿಯ ನೂತನ ಕಚೇರಿಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸಿದರು. ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ. ಲಕ್ಷ್ಮಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಇ.ಎ. ಬಕ್ಕರ್, ಕಾರ್ಯಕ್ರಮ ಸಂಘಟನಾ ಸಮಿತಿ ಎಂ.ಡಿ ಯು.ಕೆ.ಕುಞಬ್ದುಲ್ಲ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ. ಸುರೇಂದ್ರನ್, ಜಿಲ್ಲಾ ವಾರ್ತಾ ಅಧಿಕಾರಿ ಎಂ. ಮಧುಸೂದನನ್ ಉಪಸ್ಥಿತರಿದ್ದರು. ಬಿಆರ್‍ಡಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಸ್ವಾಗತಿಸಿ, ಕಾರ್ಯಕ್ರಮ ಸಮಿತಿಯ ಸಂಸ್ಥಾಪಕ ಹಕೀಮ್ ಕುನ್ನಿಲ್ ವಂದಿಸಿದರು.
ಬಿಆರ್‍ಡಿಸಿ, ಡಿಟಿಪಿಸಿ, ಕುಟುಂಬಶ್ರೀ ಮತ್ತು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಬೇಕಲ ಕರಾವಳಿ ಉತ್ಸವವನ್ನು ಆಯೋಜಿಸುತ್ತಿದ್ದು, ವಿವಿಧ ಇಲಾಖೆಗಳು ಸಹಕರಿಸಲಿವೆ. ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ಉತ್ಸವ ನಡೆಯಲಿದ್ದು, ಹೊಸ ವರ್ಷಾಚರಣೆ ಸಂಭ್ರಮದಿಂದ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವವು ಬೀಚ್ ಕಾರ್ನೀವಲ್, ವಿವಿಧ ಪ್ರದರ್ಶನ ಮಳಿಗೆಗಳು ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾಸರಗೋಡಿನ ಸಂಸ್ಕೃತಿ, ಇತಿಹಾಸ ಮತ್ತು ರುಚಿಯನ್ನು ಪ್ರವಾಸಿಗರಿಗೆ ಉಣಬಡಿಸಲಾಗುತ್ತದೆ. ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳನ್ನು ಪರಿಚಯಿಸುವ ಪ್ರದರ್ಶನಗಳು, ಆ ಸ್ಥಳಗಳಿಗೆ ಹೆಚ್ಚಿನ ಜನರನ್ನು ಸೆಳೆಯುವ ಪ್ರಯತ್ನವೂ ನಡೆಯಲಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಜತೆಗೆ ಆ ಪ್ರದೇಶದ ಜನತೆಯ ಆರ್ಥಿಕ ಉನ್ನತಿಗಾಗಿ ಬೀಚ್ ಉತ್ಸವವನ್ನು ನಡೆಸಲಾಗುತ್ತದೆ.
ಬೇಕಲ್ ಅಂತಾರಾಷ್ಟ್ರೀಯ ಕರಾವಳಿ ಉತ್ಸವ: ಸಂಘಟನಾ ಸಮಿತಿ ಕಚೇರಿ ಉದ್ಘಾಟನೆ
0
ನವೆಂಬರ್ 19, 2022
Tags