HEALTH TIPS

ಕ್ಷಯರೋಗ ಪತ್ತೆಗೆ ಕೋವಿಡ್‌ ಅಡ್ಡಿ

 

              ನವದೆಹಲಿ: ಕೋವಿಡ್‌ನಿಂದಾಗಿ 2020ರಲ್ಲಿ ಭಾರತವೂ ಸೇರಿದಂತೆ ಅತಿ ಹೆಚ್ಚು ಕ್ಷಯರೋಗಿಗಳಿರುವ 45 ದೇಶಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಮಂದಿಯ ಕ್ಷಯರೋಗ ಪತ್ತೆಯಲ್ಲಿ ವಿಳಂಬವಾಗಿದೆ ಅಥವಾ ರೋಗಪತ್ತೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧ್ಯಯನವೊಂದು ಹೇಳಿದೆ.   ಭಾರತದಲ್ಲಿ ಈ ಸಂಖ್ಯೆ 5 ಲಕ್ಷದಷ್ಟಿದೆ.

               ಬಿಎಂಸಿ ಮೆಡಿಸಿನ್‌ ಎಂಬ ನಿಯತ ಕಾಲಿಕದಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಲಂಡನ್‌ ಸ್ಕೂಲ್‌ ಆಫ್‌ ಹೈಜೀನ್‌ ಮತ್ತು ಟ್ರಾಪಿಕಲ್‌ ಮೆಡಿಸಿನ್‌ನ (ಎಲ್‌ಎಸ್‌ಎಚ್‌ಟಿಎಂ) ಅಧ್ಯಯನಕಾರರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

                ಹೆಚ್ಚು ತೊಂದರೆ ಅನುಭವಿಸಿದ ಮಕ್ಕಳು
45 ದೇಶಗಳ ಪೈಕಿ ಅರ್ಧದಷ್ಟು ದೇಶಗಳಲ್ಲಿ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಸಂಖ್ಯೆಯು ರೋಗಪತ್ತೆ ಆಗದ ಅಥವಾ ರೋಗಪತ್ತೆಯಲ್ಲಿ ವಿಳಂಬವಾದ ವಯಸ್ಕರ ಸಂಖ್ಯೆಗಿಂತ ಹೆಚ್ಚಾಗಿದೆ. ಮಕ್ಕಳ ಮೇಲೆ ಈ ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ, ಶಾಲಾ ಮಟ್ಟದಲ್ಲಿ ಹಲವು ಕ್ರಮಗಳನ್ನು ಅಲ್ಲಿನ ಸ್ಥಳೀಯ ಸರ್ಕಾರಗಳು ಕೈಗೊಳ್ಳಬೇಕು ಎಂದು ಅಧ್ಯಯನಕಾರರು ಸಲಹೆ ನೀಡಿದ್ದಾರೆ.

                 - ಭಾರತದಲ್ಲಿ 15 ವರ್ಷದೊಳಗಿನ 50,454 ಮಕ್ಕಳು, 15-64 ವರ್ಷದೊಳಗಿನ 4.2 ಲಕ್ಷಕ್ಕೂ ಹೆಚ್ಚಿನ ನಾಗರಿಕರು ಮತ್ತು 65 ವರ್ಷ ಮೇಲ್ಪಟ್ಟ 52,970 ಹಿರಿಯ ನಾಗರಿಕರಿಗೆ ಕೋವಿಡ್‌ನಿಂದಾಗಿ ಕ್ಷಯರೋಗ ಪತ್ತೆ ವಿಳಂಬ ಆಗಿದೆ ಅಥವಾ ಪತ್ತೆ ಆಗಿಲ್ಲ.

ಅಧ್ಯಯನಕಾರರು ಗಮನಿಸಿದ ಅಂಶಗಳು
* ಜಗತ್ತಿನಾದ್ಯಂತ ಸೋಂಕು ರೋಗಗಳ ಪೈಕಿ ಕ್ಷಯರೋಗದಿಂದಾಗಿ ಎರಡನೇ ಅತಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಇಂಥ ರೋಗದ ಪತ್ತೆ ಪ್ರಮಾಣವು ಕಡಿಮೆಯಾಗಿದೆ.
* ಕೋವಿಡ್‌ ಕಾರಣದಿಂದಾಗಿ ಕ್ಷಯರೋಗಿಗಳಿಗೆ ಚಿಕಿತ್ಸೆ ದೊರೆತಿಲ್ಲ. ಜೊತೆಗೆ ಕ್ಷಯರೋಗವು ಹೆಚ್ಚು ಹೆಚ್ಚು ಜನರಿಗೆ ತಗಲುತ್ತಿದೆ. ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೂರಗಾಮಿ ಪರಿಣಾಮವನ್ನು ಬೀರಬಹುದಾಗಿದೆ.
* ಮೊದಲೇ ಕ್ಷಯರೋಗದಿಂದ ತತ್ತರಿಸಿದ್ದ ಈ 45 ದೇಶಗಳಲ್ಲಿ ಕೋವಿಡ್‌ನಿಂದ ಮತ್ತೂ ಹೆಚ್ಚಿನ ತೊಂದರೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries