ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸುವ ಸಲುವಾಗಿ ನ.19ರಿಂದ ನ.30ರ ತನಕ ಪೂಜಾ ಸಮಯದಲ್ಲಿ ಬದಲಾವಣೆಯನ್ನು ತರಲಾಗಿದೆ.
ಒಳಪ್ರಾಂಗಣದಲ್ಲಿ ಹೊಸದಾಗಿ ಕಲ್ಲು ಹಾಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಈ ಕಾಮಗಾರಿ ಸುಮಾರು 10 ದಿನಗಳ ಕಾಲ ನಡೆಯಲಿದ್ದು, ಈ ನಿಟ್ಟಿನಲ್ಲಿ ಬೆಳಗ್ಗೆ ಪೂಜೆ 7 ಗಂಟೆಯಿಂದ 7.15, ಹಾಗೂ ನಂತರ 8.30ರ ಮೊದಲು ಮಧ್ಯಾಹ್ನ ಪೂಜೆಯೂ ನಡೆಯಲಿರುವುದು. ರಾತ್ರಿ 7.30ಕ್ಕೆ ಎಂದಿನಂತೆ ಪೂಜೆ ನಡೆಯಲಿದೆ. ಈ ಹತ್ತು ದಿನಗಳಲ್ಲಿ ಯಾವುದೇ ವಿಶೇಷ ಸೇವೆಗಳು ನಡೆಯುವುದಿಲ್ಲ. ದೇವಸ್ಥಾನದ ಅಭಿವೃದ್ಧಿ ಹಾಗೂ ಭಕ್ತರ ಅನುಕೂಲ ಗಮನದಲ್ಲಿಟ್ಟು ಹಲವು ಯೋಜನೆಗಳನ್ನು ಭಕ್ತಾದಿಗಳ ಸಹಕಾರದೊಂದಿಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ನಡೆಯಲಿದ್ದು ಭಕ್ತಾದಿಗಳು ಸಹಕರಿಸಬೇಕು ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.