ತಿರುವನಂತಪುರಂ: ವಿಝಿಂಜಂ ಸಂಘರ್ಷದ ಹಿನ್ನೆಲೆಯಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಹಿಂಸಾಚಾರವನ್ನು ಲ್ಯಾಟಿನ್ ಆರ್ಚ್ ಡಯಾಸಿಸ್ ಸಮರ್ಥಿಸಿಕೊಂಡಿದೆ.
ವಿಝಿಂಜಂನಲ್ಲಿ ಮೊನ್ನೆ ನಡೆದ ಘಟನೆಗಳನ್ನು ಪೋಲೀಸರು ಆಹ್ವಾನಿಸಿ ಪಡೆದುಕೊಂಡರು ಎಂದು ಫಾದರ್ ಯುಜಿನ್ ಪೆರೇರಾ ಸಭೆಯಲ್ಲಿ ಆರೋಪಿಸಿದರು.
ಠಾಣೆಗೆ ತನಿಖೆಗೆ ಬಂದವರನ್ನು ಅನ್ಯಾಯವಾಗಿ ಬಂಧಿಸಲಾಗಿತು. ಇದು ಸಹಜ ಪ್ರತಿಕ್ರಿಯೆಯಾಗಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆ ಹಾಗೂ ಅಭಿಪ್ರಾಯ ವ್ಯಕ್ತವಾಗಿದ್ದು, ಫಲಿತಾಂಶ ಏನಾಗಲಿದೆ ಎಂಬುದು ಗೊತ್ತಿಲ್ಲ ಎಂದು ಯುಜಿನ್ ಪೆರೇರಾ ಪ್ರತಿಕ್ರಿಯಿಸಿದ್ದಾರೆ.
ಏತನ್ಮಧ್ಯೆ, ಸರ್ವಪಕ್ಷ ಸಭೆ ಒಮ್ಮತವಿಲ್ಲದೆ ಕೊನೆಗೊಂಡಿತು. ವ್ಯಾಪಕ ಘರ್ಷಣೆ ತಪ್ಪಿಸಲು ಸಾಮಾನ್ಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಸಚಿವ ಜಿ.ಆರ್.ಅನಿಲ್ ತಿಳಿಸಿದರು. ವಿಝಿಂಜಂ ಬಂದರು ಯೋಜನೆಗೆ ಮುಷ್ಕರ ಸಮಿತಿ ಹೊರತುಪಡಿಸಿ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಸಚಿವರು ಹೇಳಿದರು. ಸಭೆಯಲ್ಲಿ ಧರಣಿ ಸಮಿತಿಯನ್ನು ಪ್ರತ್ಯೇಕಗೊಳಿಸಲಾಯಿತು.
ವಿಝಿಞಂ ವಿಷಯದಲ್ಲಿ ಮುಖ್ಯಮಂತ್ರಿಯವರ ಧೋರಣೆ ಪ್ರಶ್ನಾರ್ಹವಾಗಿದ್ದು, ಕಳೆದೆರಡು ದಿನಗಳಿಂದ ನಡೆದ ಗಲಭೆ ಹತ್ತಿಕ್ಕುವಲ್ಲಿ ಜಿಲ್ಲಾಡಳಿತ ಹಾಗೂ ಪೆÇಲೀಸರು ವಿಫಲರಾಗಿದ್ದಾರೆ. ಬಂದರು ನಿರ್ಮಾಣ ಬೇಡ ಎಂಬವರ ವಿರುದ್ದ ಮುಲಾಜಿಲ್ಲದೆ ಕ್ರಮ ಜರಗಿಸಬೇಕು ಮತ್ತು ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿvಯಬೇಕು ಎಂದು ಸಭೆಯಲ್ಲಿ ಬಿಜೆಪಿ ಒತ್ತಾಯಿಸಿದೆ.
ಘರ್ಷಣೆಗೆ ಪೋಲೀಸರೇ ಕಾರಣ: ಗಲಭೆ ಸಮರ್ಥಿಸಿದ ಲ್ಯಾಟಿನ್ ಚರ್ಚ್
0
ನವೆಂಬರ್ 28, 2022
Tags