ತಿರುವನಂತಪುರ: ಮಿಲ್ಮಾ ಹಾಲಿನ ದರವನ್ನು ರೂ.6ರಿಂದ ರೂ.10ರಷ್ಟು ಹೆಚ್ಚಿsಸಲು ತಜ್ಞರ ಸಮಿತಿಯ ಶಿಫಾರಸು ಮಾಡಿದೆ.
ಕೃಷಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ತಜ್ಞರು ನಡೆಸಿದ ಅಧ್ಯಯನದ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದ್ವಿಸದಸ್ಯ ಸಮಿತಿ ಈ ಕುರಿತು ಅಧ್ಯಯನ ನಡೆಸಿ ಶಿಫಾರಸು ಮಾಡಿದೆ.
ತಜ್ಞರ ಸಮಿತಿ ವರದಿ ಪ್ರಕಾರ ರಾಜ್ಯದ ರೈತರು ಎದುರಿಸುತ್ತಿರುವ ನಷ್ಟ ಪ್ರತಿ ಲೀಟರ್ ಹಾಲಿಗೆ 8.57 ರೂ. ಈ ನಷ್ಟವನ್ನು ಸರಿದೂಗಿಸಲು ಬೆಲೆಯನ್ನು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಸಮಿತಿಯು ಮೂರು ರೀತಿಯ ಬೆಲೆ ಏರಿಕೆಗೆ ಶಿಫಾರಸು ಮಾಡಿದೆ.
ನಾಲ್ಕು ಹಸುಗಳಿಗಿಂತ ಕಡಿಮೆ ಇರುವ ರೈತರು ಪ್ರಸ್ತುತ ಒಂದು ಲೀಟರ್ ಹಾಲು ಉತ್ಪಾದಿಸಲು 49.05 ರೂ.ಗಳನ್ನು ಮತ್ತು 4 ರಿಂದ 10 ಹಸುಗಳನ್ನು ಹೊಂದಿರುವ ರೈತರು ಒಂದು ಲೀಟರ್ ಹಾಲು ಉತ್ಪಾದಿಸಲು ಪ್ರಸ್ತುತ 46.68 ರೂ.ಖರ್ಚುಮಾಡುತ್ತಾರೆ. ನಷ್ಟ ಎದುರಿಸಬೇಕಾಗಿರುವುದರಿಂದ ಹೆಚ್ಚಳ ಅಗತ್ಯ ಎಂದು ದ್ವಿಸದಸ್ಯ ಸಮಿತಿ ಸ್ಪಷ್ಟಪಡಿಸಿದೆ.
ಹಾಲಿನ ದರ ಏರಿಕೆಗೆ ಶಿಫಾರಸು ಮಾಡಿದ ತಜ್ಞರ ಸಮಿತಿ: ಆರರಿಂದ ಹತ್ತು ರೂ.ಹೆಚ್ಚಿಸಲು ಸೂಚನೆ
0
ನವೆಂಬರ್ 14, 2022