HEALTH TIPS

ಪುದುಚೇರಿ: ವಿನಾಯಕ ದೇವಾಲಯದ 'ಲಕ್ಷ್ಮಿ' ಆನೆ ಹೃದಯಾಘಾತದಿಂದ ಸಾವು

Top Post Ad

Click to join Samarasasudhi Official Whatsapp Group

Qries

 

           ಪುದುಚೇರಿ: ಇಲ್ಲಿನ ಪ್ರಸಿದ್ಧ ಮನಕುಲ ವಿನಾಯಕ ದೇಗುಲಕ್ಕೆ ಸೇರಿದ್ದ ಆನೆಯೊಂದು ಹೃದಯಾಘಾತದಿಂದ ಬುಧವಾರ ಮೃತಪಟ್ಟಿದೆ. ಈ ಆನೆಗೆ ಲಕ್ಷ್ಮಿ ಎಂದು ನಾಮಕರಣ ಮಾಡಲಾಗಿತ್ತು.

                    ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಆನೆ ವಿಹಾರ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದಿದೆ.

ಮಾಹಿತಿ ತಿಳಿದು ಪಶುವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಆನೆ ಮೃತಪಟ್ಟಿತ್ತು ಎಂದು ವಿನಾಯಕ  ದೇಗುಲದ ಪ್ರಧಾನ ಆರ್ಚಕರು ಹೇಳಿದ್ದಾರೆ.

                  ಆನೆಗೆ ಯಾವುದೇ ಕಾಯಿಲೆಗಳು ಇರಲಿಲ್ಲ ಆದರೆ ಆನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.


                 1995ರಲ್ಲಿ ಈ ಆನೆಯನ್ನು ಕೈಗಾರಿಕೋದ್ಯಮಿಯೊಬ್ಬರು ದೇವಸ್ಥಾನಕ್ಕೆ ದಾನ ಮಾಡಿದ್ದರು. ಲಕ್ಷ್ಮಿ ಆನೆಯ ಆಶೀರ್ವಾದ ಪಡೆಯಲು ಕೇರಳ, ಆಂಧ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿದೇಶಿ ಭಕ್ತರು ಕೂಡ ಬರುತ್ತಿದ್ದರು.

                    ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಆಣೆಯ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ.

Paid last respects to "Laxmi" Sri Manakula Vinayagar Temple's Spiritual Elephant in #Puducherry. Recalled her blessings during my visits to the temple. புதுச்சேரி,ஸ்ரீமணக்குள விநாயகர் திருக்கோயில் யானை லட்சுமியின் பூத உடலுக்கு அஞ்சலி செலுத்தினேன்.

 

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries