ಕಾಸರಗೋಡು: ಜಾಗತಿಕ ಸಮುದಾಯದೊಂದಿಗೆ ಸಂವಹನ ನಡೆಸಲು ತರಬೇತಿ ನೀಡುವುದರೊಂದಿಗೆ ಮುಂದಿನ ತಲೆಮಾರಿಗೆ ಮಾತೃಭಾಷೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಡೆಸುವುದು ಅನಿವಾರ್ಯ ಎಂದು ಬಂದರು ಮತ್ತು ವಸ್ತುಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದರು.
ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಮಾಹಿತಿ ಕಛೇರಿ ಆಯೋಜಿಸಿದ್ದ ಭಾಷಾ ದಿನಾಚರಣೆ-ಅಧಿಕೃತ ಭಾಷಾ ಸಪ್ತಾಹದ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾತೃಭಾಷೆ ಹೃದಯದ ಭಾಷೆಯಾಗಿದ್ದು, ಮಾತೃಭಾಷೆಯ ಗೌರವವನ್ನು ಹೊರ ದೇಶಗಳಿಗೂ ವಿಸ್ತರಿಸುವಂತಾಗಬೇಕು ಎಂದು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕವಿ ರಾಧಾಕೃಷ್ಣನ್ ಪೆರುಂಬಳ, ಕನ್ನಡ ಮತ್ತು ತುಳು ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಅವರನ್ನು ಸಚಿವರು ಸನ್ಮಾನಿಸಿದರು. ಕವಿ ಪ್ರಸಾದ್ ಕರುವಾಲಂ ಹಾಗೂ ಪತ್ರಕರ್ತ ಕೆ.ಗಂಗಾಧರ ಪ್ರಶಸ್ತಿ ಪುರಸ್ಕøತರ ಪರಿಚಯ ನೀಡಿದರು. ಎಡಿಎಂ ಎ.ಕೆ.ರಾಮೇಂದ್ರನ್ ಅವರು ಅಧಿಕೃತ ಭಾಷಾ ಪ್ರಮಾಣ ವಚನ ಬೋಧಿಸಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಮಲಯಾಳ ವಿಭಾಗದ ಡಾ.ಆರ್.ಚಂದ್ರ ಬೋಸ್ ಮುಖ್ಯ ಭಾಷಣ ಮಾಡಿದರು. ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮರಾಜ್, ಜಿಲ್ಲಾಧಿಕಾರಿ (ಎಲ್‍ಎ) ಎಸ್.ಶಶಿಧರನ್ ಪಿಳ್ಳೆ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ವಂದಿಸಿದರು.
ಹೊಸ ತಲೆಮಾರಿಗೆ ಮಾತೃಭಾಷೆಯ ಮಹತ್ವ ತಿಳಿಯಪಡಿಸುವುದು ಅನಿವಾರ್ಯ: ಸಚಿವ ಅಹಮ್ಮದ್ ದೇವರಕೋವಿಲ್
0
ನವೆಂಬರ್ 02, 2022
Tags