ಮಂಗಳೂರು: ಕಳೆದ ಆರು ದಶಕಗಳಿಂದ ಹರಿದಾಸ ಸಂಕೀರ್ತನಗಾರರಾಗಿ, ನಾಟಕ ರಚನೆ,ನಿರ್ದೇಕ,ನಟರಾಗಿ, ಭಜನಾ ಗುರು ಹಾಗೂ ಬರಹಗಾರರಾಗಿ ಸಾಂಸ್ಕøತಿಕ ವಲಯದಲ್ಲಿ ಗುರುತಿಸಿಕೊಂಡಿರುವ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ದಾಸವರೇಣ್ಯ,ದಾರ್ಶನಿಕ ಕವಿ,ಸಂತ ಶ್ರೇಷ್ಠ ಕನಕದಾಸ ಜಯಂತ್ಯೋತ್ಸವದ ಅಂಗವಾಗಿ
ಮಂಗಳೂರು ಕದ್ರಿ ಕಂಬಳದ ವಾದಿರಾಜ ಮಂಟಪದ ವಿಶ್ವೇಶ ತೀರ್ಥ ವೇದಿಕೆಯಲ್ಲಿ ಪ್ರತಿಷ್ಠಿತ ಕನಕದಾಸ ಪ್ರಶಸ್ತಿ ಪ್ರದಾನಿಸಲಾಯಿತು.
ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಪ್ರಶಸ್ತಿ ಪ್ರದಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಪ್ರದೀಪ್ ಕುಮಾರ ಕಲ್ಕೂರ ವಹಿಸಿದ್ದರು.ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಡಾ.ಎಂ.ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ್, ಜಿ.ಕೆ.ಭಟ್ ಸೇರಾಜೆ, ಹರಿಕೃಷ್ಣ ಪುನರೂರು, ಶಿವರಾಮ ಕಾಸರಗೋಡು ಸಹಿತ ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.
ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ "ಕನಕದಾಸ ಪ್ರಶಸ್ತಿ" ಪ್ರದಾನ
0
ನವೆಂಬರ್ 16, 2022